ಪಾಲನೆ ನ್ಯೂಸ್
ಬೆಂಗಳೂರು: ರಾಜ್ಯದ ಎಲ್ಲ 224 ಮಂದಿ ಶಾಸಕರೂ ಮುಖ್ಯ ಮಂತ್ರಿಯಾಗಲು ಅರ್ಹರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಷಯದಲ್ಲಿ ನಯವಾಗಿ ಜಾರಿಕೊಂಡರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಅವ ರನ್ನು ಬಿಜೆಪಿಯ ಹಿರಿಯ ಶಾಸಕ ಸುನಿಲ್‌ಕುಮಾರ್ ಅವರು ಮಧ್ಯಪ್ರವೇಶಿಸಿ ಡಿ.ಕೆ.ಶಿವ ಕುಮಾರ್ ಅವರು ಮುಖ್ಯ ಮಂತ್ರಿಯಾದರೂಖುಷಿಯಾಗು ಇದೆ ಎಂದು ಹೇಳಲಿಲ್ಲ ಎಂದು ಛೇಡಿಸಿದರು. ಆಗ ಮುಖ್ಯಮಂತ್ರಿಗಳು, ನಮ್ಮ ಪಕ್ಷದ ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯ ಮಂತ್ರಿ ಎಂಬುದನ್ನು ಪುನರುಚ್ಚರಿ ಸಿದರು. ನಮ್ಮಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಖುಷಿ ಯಾಗುತ್ತದೆ. 224 ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರು. ಯಾರೇ ಮುಖ್ಯಮಂತ್ರಿ ಯಾದರೂ ಖುಷಿಪಡುತ್ತೇನೆ.

ಸಚಿವರಾದ ಎಂ.ಬಿ.ಪಾಟೀಲ್, ಹೈಕಮಾಂಡ್ ತೀರ್ಮಾನ ಮಾಡುವವರೆಗೂ ಯು.ಟಿ. ಖಾದರ್ ಅವರು ಸಭಾಧ್ಯಕ್ಷ ರಾಗಿರುತ್ತಾರೆ. 2028ರ ಚುನಾವಣೆಯಲ್ಲೂ ಖಾದರ್ ಗೆಲ್ಲುತ್ತಾರೆ, ನೀವು ಏನೇ ಕಿತಾ ಪತಿ ಮಾಡಿದರೂ, ಜಾಕ್ ಹಾಕಿ ಎತ್ತಿದರೂ ಅವರು ಮನ್ನಣೆ ಕೊಡುವುದಿಲ್ಲ. ನಾನೂ ಕೂಡ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ. ಸಿದ್ದರಾಮಯ್ಯ, ಸಿಎಂ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂ ರಾವ್, ಶಾಸಕ ಕೋನ ರೆಡ್ಡಿ ಸೇರಿದಂತೆ ಕೆಲವರ ಹೆಸರನ್ನು ಮಾತ್ರ ಉಲ್ಲೇಖಿಸಿ ಅವರು ಮುಖ್ಯ ಮಂತ್ರಿಯಾಗಬಾರದೇ ಎಂದು ಪ್ರಶ್ನಿಸಿದರು. ಅವರೆಲ್ಲ ರಿಗೂ ಯೋಗ್ಯತೆ ಇದೆ, ಅವಕಾಶ ಸಿಗಲ್ಲ ಅಷ್ಟೇ ಎಂದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
