NEWS

ರಾಜ್ಯಮಟ್ಟದ ಅಂತರ ವಿದ್ಯುತ್ ಕಂಪನಿಗಳ ಕ್ರೀಡಾಕೂಟಕ್ಕೆ ಚಾಲನೆ

    ಎರಡು ದಿನಗಳ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ

    ಪಾಲನೆ ನ್ಯೂಸ್

    ಮಂಡ್ಯ: ಇಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕ್ರೀಡಾ ಸಂಸ್ಥೆ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಮೈಸೂರು ವತಿಯಿಂದ 2025-26ನೇ ಸಾಲಿನ ರಾಜ್ಯಮಟ್ಟದ ಅಂತರ ವಿದ್ಯುತ್ ಕಂಪನಿಗಳ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ದೊರೆಯಿತು.

    ಮಂಡ್ಯದ ಪಿಇಟಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ಎ.ಬಿ. ರಮೇಶ್ ಮಾತನಾಡಿ, ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ದಿನದ 24 ಗಂಟೆಗಳು ಬಿಡುವಿಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸಿಬ್ಬಂದಿಗೆ ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಅವರಲ್ಲಿನ ಒತ್ತಡ ಕಡಿಮೆಯಾಗಿ, ಸ್ವಲ್ಪಮಟ್ಟಿನ ಮನರಂಜನೆ ಸಿಗಲಿದೆ. ಆದ್ದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಆಟಗಾರರು ಅತ್ಯುತ್ಸಾಹದಿಂದ ಭಾಗವಹಿಸಿ ಎಂದು ಶುಭಹಾರೈಸಿದರು.

    ಎರಡು ದಿನಗಳ ಕ್ರೀಡಾಕೂಟದಲ್ಲಿ ಸೆಸ್ಕ್, ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿಗಳ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್‌ ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿವೆ.

    ಇದೇ ವೇಳೆ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ನಿಶಿತಾ (ಷಟಲ್ ಬ್ಯಾಡ್ಮಿಂಟನ್), ನಂದೀಶ್ (ಷಟಲ್ ಬ್ಯಾಡ್ಮಿಂಟನ್) ಹಾಗೂ ಕಾರ್ತಿಕ್ (ಕಬಡ್ಡಿ) ಅವರನ್ನು ಸನ್ಮಾನಿಸಲಾಯಿತು. ನಂತರ ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಷಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ನಿಶಿತಾ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರಮಾಣವಚನ ಬೋಧಿಸಿದರು.

    ಸಮಾರಂಭದಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ಮುಖ್ಯ ಇಂಜಿನಿಯರ್ ಹಾಗೂ ಸೆಸ್ಕ್ ಕ್ರೀಡಾ ಸಮಿತಿ ಅಧ್ಯಕ್ಷ ಎ.ಎ. ಸುನೀಲ್ ಕುಮಾರ್, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ ಬಿ.ಆರ್. ರೂಪ, ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷ ಕೆ. ಬಲರಾಂ, ಕವಿಮಂ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್. ಗಿರೀಶ್, ಕವಿಪ್ರನಿನಿ ಕ್ರೀಡಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮೈಕೆಲ್ ವಾಷಿಂಗ್ಟನ್ ಹಾಗೂ ಅಧೀಕ್ಷಕ ಇಂಜಿನಿಯರುಗಳಾದ ಜೆ.ಎಸ್. ಲೋಕೇಶ್, ಬಿ. ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಕೋಟ್:
    ಎರಡು‌ ದಿನಗಳ ಕ್ರೀಡಾಕೂಟವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಕ್ರೀಡಾಪಟುಗಳು ಅತ್ಯಂತ ಸಂತೋಷದಿಂದ ಹಾಗೂ ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸುವ ಮೂಲಕ ವಿದ್ಯುತ್ ಕಂಪನಿಗಳ ಕ್ರೀರ್ತಿಯನ್ನು ಹೆಚ್ಚಿಸಬೇಕಿದೆ.

    ಕೆ.ಎಂ. ಮುನಿಗೋಪಾಲ್ ರಾಜು
    ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.

    ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ: ಡಿಕೆಶಿ ಸ್ಪಷ್ಟನೆ

    ಯುವ ಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಡಾ. ವಿ. ಜೆ. ಶೋಭರಾಣಿ

    ಅನಕ್ಷರಸ್ಥರು ಸೃಷ್ಟಿಸಿದ ಅದ್ಭುತ ಲೋಕ ಜಾನಪದ : ಕನ್ನಿಕ

    Leave a Comment