NEWS

ಕಲ್ಲಂಗಡಿ ಹಣ್ಣು ತಿಂದು ನಾಲ್ವರು ಮೃತ

ಪಾಲನೆ ನ್ಯೂಸ್

ಮುಂಬೈ (ಮೇ.01) ಕಲ್ಲಂಗಡಿ ಹಣ್ಣು ತಿಂದು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಹಲವರು ಮನೆಯಲ್ಲಿ ತಂದಿದ್ದ ಕಲ್ಲಂಗಡಿ ಹಣ್ಣನ್ನೇ ಕಸದು ಬುಟ್ಟಿಗೆ ಎಸೆದಿದ್ದರು. ಬೇಸಿಗೆಯಲ್ಲಿ ಬಹುತೇಕರು ಸವಿಯುತ್ತಿದ್ದ ಕಲ್ಲಂಗಡಿ ಹಣ್ಣು ವಿಷಕಾರಿಯಾಗಿ ಕಂಡಿತ್ತು. ಮುಂಬೈನಲ್ಲಿ ಅಬ್ದುಲ್ಲಾ ದಕೋಡಿಯಾ ಕುಟುಂಬ ತಡ ರಾತ್ರಿ ಕಲ್ಲಂಗಡಿ ಹಣ್ಣು ತಿಂದು ಬೆಳಗ್ಗೆ ಮೃತಪಟ್ಟ ಘಟನೆ ಕೋಲಾಹಲಕ್ಕೆ ಕಾರಣಾಗಿತ್ತು. ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರವಲ್ಲ, ಈ ಸಾವಿನ ಹಿಂದೆ ವಿಷದ ಅಂಶ ಇದೆ ಅನ್ನೋ ಮಾಹಿತಿಗಳು ಬಯಲಾಗಿದೆ.

ವೈದ್ಯಕೀಯ ಪರೀಕ್ಷಾ ವರದಿ

ಅಬ್ದುಲ್ಲಾ ದಕೋಡಿಯಾ ಕುಟುಂಬ ಕಲ್ಲಂಗಣಿ ಹಣ್ಣು ತಿಂದು ಸಾವನ್ನಪ್ಪಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣಾಗಿತ್ತು. ಸದ್ಯ ಫೊರೆನ್ಸಿಕ್ ಪರೀಕ್ಷೆ ಬೆರೆ ಕತೆ ಹೇಳುತ್ತಿದೆ. ಮೃತರ ದೇಹದ ಮೆದುಳು, ಹೃದಯ ಸೇರಿದಂತೆ ಕೆಲ ಭಾಗಗಳು ಹಸಿರು ಬಣ್ಣಕ್ಕೆ ತಿರುಗಿದೆ. ಈ ವರದಿಯನ್ನು ವೈದ್ಯರ ವಿಶ್ಲೇಶಿಸಿದ್ದಾರೆ. ಫುಡ್ ಪಾಯ್ಸನ್‌ನಿಂದ ಈ ರೀತಿ ಆಗಲು ಸಾಧ್ಯವಿಲ್ಲ. ಇದು ಪ್ರಮುಖ ವಿಷಕಾರಿ ವಸ್ತು ದೇಹದೊಳಕ್ಕೆ ಸೇರಿದೆ ಎಂಬ ಮಾಹಿತಿಗಳು ಬಯಲಾಗಿದೆ.

ಅಬ್ದುಲ್ಲಾ ದಕೋಡಿಯಾ ದೇಹದಲ್ಲಿನ ವಿಷಕಾರಿ ಅಂಶಗಳ ಕುರಿತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದೆ. ಈ ವೈದ್ಯಕೀಯ ವರದಿಯ ಪ್ರಾಥಮಿಕ ಮಾಹಿತಿ ಪ್ರಕಾರ ನೋವಿನ ಮಾತ್ರೆ(ಮೊರ್ಫೈನ್), ಪೊಟೆಂಟ್ ಪೈನ್‌ಕಿಲ್ಲರ್ಸ್ ಸೇರಿದಂತೆ ಕೆಲ ಅಪಾಯಕಾರಿ ಅಂಶಗಳು ಅಬ್ದುಲ್ಲಾ ದಕೋಡಿಯಾ ದೇಹದಲ್ಲಿ ಪತ್ತೆಯಾಗಿದೆ ಅನ್ನೋ ವರದಿ ಬಹಿರಂಗವಾಗಿದೆ. ಇದೇ ವೇಳೆ ರಾಜ್ಯ ಆಹಾರ ಸಚಿವಾಲಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತ ವರದಿ, ಪರೀಕ್ಷೆಗಳ ವರದಿ ತರಿಸಿಕೊಂಡಿದ್ದಾರೆ. ಇತ್ತ ಈ ಸಾವಿನ ಹಿಂದೆ ನೇರವಾಗಿ ಕಲ್ಲಂಗಡಿ ಹಣ್ಣ ಹಾಗೂ ಅದರಲ್ಲಿನ ವಿಷಕಾರಕ ಅಂಶಗಳು ಕಾಣುತ್ತಿಲ್ಲ ಎಂದಿದ್ದಾರೆ. ಅಧಿಕೃತ ವರದಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯಮಗಳಿಗೆ ಒತ್ತು ನೀಡಿ

‘ಬಾಸ್’ ಸಿನಿಮಾ ಮರು ಬಿಡುಗಡೆಗೆ ತಡೆಯಾಜ್ಞೆ

Leave a Comment