NEWS

ರಂಗೋಲಿ ಕೇವಲ ಚುಕ್ಕೆ- ಗೆರೆ- ಬಣ್ಣಗಳ ಚಿತ್ತಾರವಲ್ಲ: ಕೆ.ಟಿ. ಹನುಮಂತು

ಯುಗಾದಿ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಪಾಲನೆ ನ್ಯೂಸ್

ಮಂಡ್ಯ: ರಂಗೋಲಿ ಕೇವಲ ಚುಕ್ಕೆ,ಗೆರೆ,ಬಣ್ಣಗಳ ಚಿತ್ತಾರವಲ್ಲ. ಮಾನಸಿಕ, ದೈಹಿಕ, ಆಧ್ಯಾತ್ಮಿಕ, ಸಾಮಾಜಿಕ, ವೈಜ್ಞಾನಿಕ ಹಾಗೂ ಇತರ ಭಿನ್ನ ವಿಭಿನ್ನ ಅಂಶಗಳೆಲ್ಲವನ್ನೂ ಒಳಗೊಂಡಿದೆ ಎಂದು ಕನ್ನಡ ಪರಿಚಾರಕ ಕೆ.ಟಿ. ಹನುಮಂತು ಅಭಿಪ್ರಾಯಪಟ್ಟರು.

ಕೆ.ಟಿ.ಹೆಚ್. ಕನ್ನಡ ಬಳಗ ಹಾಗೂ ನಂಜಮ್ಮ ಮೋಟೆಗೌಡ ಚಾರಿಟೇಬಲ್ ಅಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ, ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಆಯೋಜಿಸಲಾಗಿದ್ದ ಯುಗಾದಿ ರಂಗೋಲಿ ಸ್ಪರ್ಧೆ ಯಲ್ಲಿ ರಂಗೋಲಿಗೆ ಬಣ್ಣ ತುಂಬುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಈ ಹಿಂದೆ ಮಹಿಳೆಯರು ಮನೆಯ ಮುಂದೆ ಹಾಗೂ ಹೊಸ್ತಿಲನ್ನು ಶುಚಿಗೊಳಿಸಿ, ಅಕ್ಕಿ ಹಿಟ್ಟಿನಿಂದ ರಂಗೋಲಿ ಬಿಡಿಸುತ್ತಿದ್ದರು. ಬಣ್ಣಗಳಿಂದ ಅಲಂಕಾರ ಮಾಡುತ್ತಿದ್ದರು. ಅಕ್ಕಿ ಹಿಟ್ಟು ಕ್ರಿಮಿಕೀಟ, ಪಕ್ಷಿಗಳಿಗೆ ಆಹಾರ ವಾಗುತ್ತಿತ್ತು. ಅವುಗಳು ರಂಗೋಲಿ ದಾಟಿ ಹೊಸ್ತಿಲು ತುಳಿಯಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಹೊಸ್ತಿಲಿಗೆ ಹರಿಶಿಣ ಕುಂಕುಮ ಲೇಪಿಸುತ್ತಿದ್ದರು. ಇದು ಒಂದು ಧಾರ್ಮಿಕ ಹಾಗೂ ವೈಜ್ಞಾನಿಕ ಪದ್ಧತಿಯೂ ಆಗಿತ್ತು ಎಂದು ತಿಳಿಸಿದರು.

ರಂಗೋಲಿ ಹಾಕುವಾಗ ವಿವಿಧ ಭಂಗಿಗಳಲ್ಲಿ ಕೂರಬೇಕಾದ ಕಾರಣ ಅರೋಗ್ಯಕರ ಕನಿಷ್ಠ ದೈಹಿಕ ವ್ಯಾಯಾಮವೂ, ಮಾನಸಿಕ ಏಕಾಗ್ರತೆಯೂ ಹೆಚ್ಚಾಗಲೂ ಸಹಕಾರಿಯಾಗುತ್ತಿತ್ತು. ರಂಗೋಲಿಯ ಮೂಲಕವೂ ನೋವು – ನಲಿವು ಇತರೆ ರೀತಿಯ ತಮ್ಮ ಅಭಿಪ್ರಾಯ ಆಲೋಚನೆಗಳನ್ನು ಅಭಿವ್ಯಕ್ತಗೊಳಿಸುವ ಸಂವಹನವಾಗಿ ಬಳಸಬಹುದಾಗಿತ್ತು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿಯೂ ಮನೆ ಮುಂದೆ ಅಲ್ಲದೇ ಮನೆಯ ಒಳಗಡೆ ಹಾಗೂ ಗೋಡೆಗಳ ಮೇಲೆಯೂ ಅಲಂಕಾರಿಕವಾಗಿ ರಂಗೋಲಿಯ ವಿವಿಧ ರೂಪಗಳನ್ನು ಬಳಸುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರತಿಭಾoಜಲಿ ಡೇವಿಡ್, ದರಸಗುಪ್ಪೆ ಧನಂಜಯ, ಮಂಗಲ ಯೋಗೇಶ್, ಅರವಿಂದ ಪ್ರಭು, ದೇವರಾಜು, ವೈರಮುಡಿ, ಹುಸ್ಕೂರ್ ಕೃಷ್ಣೇಗೌಡ, ಶ್ವೇತಾ, ರಮ್ಯಾ, ರೂಪಾ ವಿನಯ್, ರಾಜೇಶ್ವರಿ, ಅರುಣ್ ಕುಮಾರಿ, ವಿನುತ ಇತರೇ ರಂಗೋಲಿ ಸ್ಪರ್ದಿಗಳು ಉಪಸ್ಥಿತರಿದ್ದರು.

ಬಹುಮಾನ ವಿತರಣೆ

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಾಂಧಿ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಥಮ ಬಹುಮಾನ 3000 ರೂ.ಗಳನ್ನು ಜಿ. ಎಲ್ ಪ್ರೀತಿ, ದ್ವಿತೀಯ ಬಹುಮಾನ  2000 ರೂ.ಗಳನ್ನು ಭವಾನಿ ಜೆ., ತೃತೀಯ ಬಹುಮಾನ  1000 ರೂಂ.ಗಳನ್ನು ಲಿಖಿತ ಜಿ. ಆರ್., ನಾಲ್ಕನೇ ಬಹುಮಾನವನ್ನು ಕವನ, ಸುಮಿತ್ರ ಡಿ.ಕೆ. ತೀರ್ಪುಗಾರರ ಮೆಚ್ಚುಗೆ ಪಡೆದರೆ ಆರನೇ ತರಗತಿ ವಿದ್ಯಾರ್ಥಿ ಎಂ. ಸಿ. ಶ್ರೀ ಲಕ್ಷ್ಮಿ ವಿಶೇಷ ಬಹುಮಾನ ಪಡೆದರು.  ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು.

Related posts

ಲೋಕಸೇವಾನಿರತೆ ಯಶೋಧರ ದಾಸಪ್ಪ

“ಕಾಡ್ಡಿಚ್ಚಿನಿಂದ ವನ್ಯಜೀವಿಗಳು, ಅರಣ್ಯ ನಾಶ’ ವಾಗುತ್ತದೆ.

ಪುಸ್ತಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

Leave a Comment