NEWS

ಮಾ.28ಕ್ಕೆ ಐಪಿಎಲ್ ಶುರು

ಪಾಲನೆ ನ್ಯೂಸ್

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾ.28ಕ್ಕೆ ಆರಂಭಗೊಳ್ಳಲಿದೆ. ಟೂರ್ನಿ ಆರಂಭದ ದಿನಾಂಕ ಈಗಾಗಲೇ ಬಹಿರಂಗಗೊಂಡಿತ್ತಾದರೂ, ಟೂರ್ನಿಯ ಪ್ರಸಾರಕ ಸಂಸ್ಥೆ ಸ್ಟಾ‌ರ್ ಸ್ಪೋರ್ಟ್ಸ್ ಭಾನುವಾರ ಅಧಿಕೃತವಾಗಿ ದಿನಾಂಕ ಘೋಷಿಸಿತು. ಟೂರ್ನಿಯ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.ಜೊತೆಗೆ ಫೈನಲ್ ಪಂದ್ಯ ಕೂಡಾ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ ಟೂರ್ನಿಯ ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜನವರಿ 26ರಂದು 77ನೇ  ಗಣರಾಜ್ಯೋತ್ಸವ ದಿನಾಚರಣೆ

ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಮತ್ತು ಶೂನ್ಯಕ್ಕೆ ತರುವಂತೆ ಅಗತ್ಯ ಕ್ರಮ ವಹಿಸಿ – ಡಾ. ಕುಮಾರ

ಫೆ.16ರಂದೂ ಬಂದ ಇ-ಮೇಲ್ ಸಂದೇಶದಲ್ಲಿ ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ

Leave a Comment