ಪಾಲನೆ ನ್ಯೂಸ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ಐತಿಹಾಸಿಕ 17ನೇ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಿದ್ದರಾಮಯ್ಯ ಅವರ ಬೃಹತ್ ಚಿತ್ರ ರಚಿಸಿ ಅಭಿಮಾನ ಮರೆಯಲಾಗಿದೆ.
ಡಾ.ಯತೀಂದ್ರ ಸಿದ್ದರಾಮಯ್ಯ ಯುವ ಬ್ರಿಗೆಡ್ ವತಿಯಿಂದ ಭುವನ್ ಫೌಂಡೇಷನ್‌ನ ಕಲಾವಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪ್ರತಿಯ ಸೂಟ್‌ಕೇಸ್ ಹಿಡಿದಿರುವ ಹಾಗೂ ಹಿಂಬದಿಯಲ್ಲಿ ಕರ್ನಾಟಕದ ನಕ್ಷೆ ಇರುವ ಬೃಹತ್ ಚಿತ್ರವನ್ನು ರಚಿಸಿ ಗುರುವಾರ ಅನಾವರಣಗೊ ಳಿಸಿದರು. ಸುಮಾರು 8000 ಚದುರ ಅಡಿಯಲ್ಲಿ ಸುಮಾರು 125 ಅಡಿ ಉದ್ದ ಹಾಗೂ 65 ಅಡಿ ಅಗಲದಲ್ಲಿ ಸಿದ್ದರಾಮಯ್ಯ ಅವರ ಚಿತ್ರವನ್ನು ರಚಿಸಲಾಗಿದ್ದು, ಇದಕ್ಕಾಗಿ ಸತತ 10 ಗಂಟೆಗಳ ಕಾಲ 5 ಮಂದಿ ಕಲಾವಿದರು ಶ್ರಮ ಹಾಕಿದ್ದಾರೆ.

ಈ ಚಿತ್ರವನ್ನು ಕಲಾವಿದರಾದ ಪುನೀತ್, ಸಿ. ಲಕ್ಷ್ಮೀ, ರವಿಚಂದ್ರನ್, ಸಂಜಯ್, ಕಂಸಾಳೆ ರವಿ ಅವರು ಈ ರಚಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತು ಪದಾಧಿಕಾರಿಗಳು ಸಾಂಕೇತಿಕ ವಾಗಿ ಚಿತ್ರವನ್ನು ಅನಾವರಣಗೊಳಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

