NEWS

ಪುಸ್ತಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

ಪಾಲನೆ ನ್ಯೂಸ್

ಮೈಸೂರು: ಪುಸ್ತಕ ಎಂಬುದು ಕೇವಲ ಹಾಳೆಗಳ ಕಟ್ಟಲ್ಲ.ಬದಲಿಗೆ ಪುಸ್ತಕ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ’ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಡಾ.ಮಾನಸ ಅಭಿಮತ ಅಭಿಪ್ರಾಯಪಟ್ಟರು. ಭಾನುವಾರ ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆ ಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಓದುವವರ ಸಂಖ್ಯೆ ಕಡಿಮೆ ಇರಬಹುದು ಆದರೆ,ಜನರು ಪುಸ್ತಕ ಪ್ರೀತಿಯನ್ನು ಸಂಪೂರ್ಣವಾಗಿ ತ್ಯಜಿಸಿಲ್ಲ. ಈ ಹಿನ್ನೆಲೆಯಲ್ಲಿ ಪುಸ್ತಕ ಪ್ರೀತಿಯನ್ನು ನಾವು ಉತ್ತೇಜಿಸಬೇಕು. ಇದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ನಮ್ಮ ಸಾಹಿತಿಗಳಲ್ಲಿ, ಪ್ರಕಾಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಮಸ್ಯೆಗೊಂದು ಸಕಾರಾತ್ಮಕ ಪರಿಹಾರ ಕಂಡುಕೊಳ್ಳಬೇಕುಎಂದು ತೀರ್ಮಾನಿಸಲಾಯಿತು ಎಂದು ಹೇಳಿದರು. ಇದರ ಜೊತೆಗೆ ಪುಸ್ತಕ ಪ್ರಾಧಿಕಾರ ಎಂಬುದು ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು ಎಂಬುದು ನನ್ನ ಉದ್ದೇಶ. ಹೀಗಾಗಿ ‘ಅಂಗಳದಲ್ಲಿ ತಿಂಗಳ ಪುಸ್ತಕ’, ‘ನೂರು ಮನೆಗಳಲ್ಲಿ ನೂರು ಪುಸ್ತಕ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದರು.

ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಆಸ್ತಿತ್ವಕ್ಕೆ ತರುವ ಚಿಂತನೆ ಇದೆ. ಒಂದು ಲಕ್ಷ ಗ್ರಂಥಾಲಯಗಳಲ್ಲಿ ಕನಿಷ್ಠ 500 ಪುಸ್ತಕಗಳು ಖರೀದಿಯಾದರೂ ಒಟ್ಟು 5 ಕೋಟ ಪುಸ್ತಕಗಳು ಬೇಕು. ಅವುಗಳನ್ನು ರಾಜ್ಯದ ಯಾವುದಾದರೂ ಪುಸ್ತಕ ಮಳಿಗೆಗಳಲ್ಲೇ ಖರೀದಿಸ ಬೇಕು. ಇದರಿಂದ ಲೇಖಕರು, ಮುದ್ರಕರು, ಪ್ರಕಾಶಕರು ಹೀಗೆ ಸಾಕಷ್ಟು ಜನರಿಗೆ ಒಳ್ಳೆಯದಾ ಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಇದು 14ನೇ ಕಾರ್ಯಕ್ರಮ ವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಸಕರು, ಅವರ ಬೆಂಬಲಿಗರು, ಚಿತ್ರ ನಟರು, ಅವರ ಅಭಿಮಾನಿಗಳು ಹೀಗೆ ಎಲ್ಲರ ಮನೆಗಳಲ್ಲಿ ಸಣ್ಣ ಪುಸ್ತಕ ಎಂಬುದು ಕೇವಲ ಸರಕಾಗದೆ ಅದೊಂದು ಸಂಸ್ಕೃತಿಯಾಗಿ ಮನ ಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವವನ್ನು ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದದ್ದೇ ನಮ್ಮ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆ ‘ಮನೆಗೊಂದು ಗ್ರಂಥಾಲಯ’ -ಡಾ.ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಗ್ರಂಥಾಲಯಗಳನ್ನು ಆರಂಭಿಸಿ ಪುಸ್ತಕ ಪ್ರೀತಿ ಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಪ್ರೊ.ಕಾಳೇಗೌಡ ನಾಗವಾರ ಅವರು ಪುಸ್ತಕ ಸಂಸ್ಕೃತಿ ಬಗ್ಗೆ ಉಪನ್ಯಾಸ ನೀಡಿದರು. ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಕದಂಬ, ದೇವರಾಜು ಪಿ. ಚಿಕ್ಕಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಜನಗಣತಿ

ತುಂಗಾಭದ್ರಾ ಕ್ರೆಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ ಹಣ ವಾಪಸ್: ಸರ್ಕಾರದ ವಿರುದ್ಧ BJP ಆಕ್ರೋಶ

29 ಮಂದಿ ಜೂಜುಕೋರರ ಬಂಧನ: 10 ಲಕ್ಷ ರೂ. ವಶ

Leave a Comment