NEWS

ರಾಘವೇಂದ್ರ ಸ್ವಾಮೀಜಿಯವರು ಸರ್ವಕಾಲಿಕ್ಕೂ ಪವಾಡಪುರುಷ ; ರಾಜೇಶ್ ಪಳನಿ

ಪಾಲನೆ ನ್ಯೂಸ್

ಮೈಸೂರು: ರಾಘವೇಂದ್ರ ಸ್ವಾಮೀಜಿಯವರು ಸರ್ವಕಾಲಿಕ್ಕೂ ಪವಾಡಪುರುಷ. ಅವರು ರಚಿಸಿದ 51 ಅಪೂರ್ವ ಗ್ರಂಥಗಳೇ ಇದಕ್ಕೆ ಸಾಕ್ಷಿಎಂದು ಉದ್ಯಮಿ ರಾಜೇಶ್ ಪಳನಿ ಹೇಳಿದರು. ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಮಹೋತ್ಸವ ಅಂಗವಾಗಿ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ‌

ರಾಯರ ವೃಂದಾವನ ಮಾಡಿದ ಸ್ಥಳ ಜಾತಿ ಭೇದವಿಲ್ಲದೆ ಎಲ್ಲರನ್ನೂ ಉದ್ದಾರ ಮಾಡುತ್ತಿದೆ. ಅವರ ಪವಾಡಗಳು ಆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶಾದ್ಯಂತ ಸಂಚರಿಸಿ ಪಾಠ ಪ್ರವಚನ ಮಾಡಿದ್ದಾರೆ. ಅವರು ರಚಿಸಿದ ಗ್ರಂಥಗಳಿಂದ ಜ್ಞಾನದ ಶ್ರೀಮಂತಿಕೆ ಲಭಿಸಿದೆ ಎಂದು ಹೇಳಿದರು. ರಾಯರ ಮಠವೂ ಲೋಕಿಕವಾಗಿ ಮಾತ್ರವಲ್ಲ ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಶ್ರೀಮಂತವಾಗಿದೆ. ಮಠವು ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸುಭಿಕ್ಷೆಗೆ ಕಾರಣವಾಗಲಿ ಎಂದು ಹೇಳಿದರು.

ಶ್ರೀ ಸುಶಮಿಂದ್ರ ತೀರ್ಥ ಸೇವಾ ಸಮಿತಿಯ ನಾಗರಾಜ್, ವರುಣ ಮಹಾದೇವ್, ಓಂಕಾರ್ ಆನಂದ್, ಕಿರಣ, ರಾಜೇಶ್ ಪಳನಿ, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಎಂ.ಡಿ. ಪಾರ್ಥಸಾರಥಿ, ಜಿ.ಎಂ. ಪಂಚಾಕ್ಷರಿ, ಶೇಖರ್, ಎಸ್.ಎನ್.ರಾಜೇಶ್, ಡೈರಿ ವೆಂಕಟೇಶ್, ಇಡ್ಲಿ ಸ್ವಾಮಿ ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಹಾಗೂ ಕಾಮಗಾರಿಗಳಿಗೆ ಆದ್ಯತೆ ನೀಡಿ : ಡಾ ಕುಮಾರ್

(ಜಿಎಸ್‌ಟಿ) ಸಂಗ್ರಹ ₹2.43 ಲಕ್ಷ ಕೋಟಿ

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

Leave a Comment