NEWS

ಮೂಢನಂಬಿಕೆಗಳನ್ನು ತೊಲಗಿಸಿ ವೈಚಾರಿಕತೆಯ ಅರಿವು ಮೂಡಿಸಿ : ಶಿವಲಿಂಗಯ್ಯ

ಪಾಲನೆ ನ್ಯೂಸ್

ಮಂಡ್ಯ: ನಮ್ಮ ದೇಶದಲ್ಲಿ ಮೂಢನಂಬಿಕೆಗಳ ಆಚರಣೆ ಅತಿ ಹೆಚ್ಚಾಗಿ ನಡೆಯುತ್ತಿದೆ. ಸಮಾಜದ ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತೊಲಗಿಸಿ ವೈಚಾರಿಕತೆಯ ಬಗ್ಗೆ ಅರಿವು ಮೂಡಿಸಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಮಂಡಳಿ ಅಧ್ಯಕ್ಷರಾದ ಶಿವಲಿಂಗಯ್ಯ ಸಿ. ರವರು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜು(ಸ್ವಾ) ಮಂಡ್ಯ,ವಿಜ್ಞಾನ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನಿಕ ಸಂಶೋಧನಾ ಮಂಡಳಿ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಂಡ್ಯ ವಿಜ್ಞಾನೋತ್ಸವ – 2026 ವೈಜ್ಞಾನಿಕ ಅರಿವು ಮತ್ತು ರಹಸ್ಯ ಬಯಲು ಕಾರ್ಯಕ್ರಮ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿರುವ ವನರಂಗದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಢ್ಯಾಚರಣೆಯಲ್ಲಿ ವಿಶ್ವದಲ್ಲಿ ಭಾರತ 2 ನೇ ಸ್ಥಾನವನ್ನು ಪಡೆದಿದೆ. ಇದು ನಮ್ಮ ದೇಶಕ್ಕೆ ಕಳಂಕವಾಗಿದೆ.ಇದನ್ನು ವೈಜ್ಞಾನಿಕವಾಗಿ ದಾರಿಗೆ ತರುವ ಉದ್ದೇಶದಿಂದ ನಮ್ಮ ಪರಿಷತ್ ರಾಜ್ಯಾದ್ಯಂತ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಹೆಣ್ಣು ಮಕ್ಕಳಲ್ಲಿ ಮೂಡ ನಂಬಿಕೆ ಹೆಚ್ಚು ಆಚರಣೆಯಲ್ಲಿದ್ದು ಹಾಗಾಗಿ ಅವರಿಂದಲೇ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಶುಪಾಲರಾದ ಪ್ರೊ. ಗುರುರಾಜ ಪ್ರಭು ಕೆ. ಮಾತನಾಡಿ, ನಾವು ಎಷ್ಟೇ ಮುಂದುವರಿದಿದ್ದರೂ ಕೂಡ ಮೂಢನಂಬಿಕೆ ಎಂಬುದನ್ನು ಕಾಣಬಹುದಾಗಿದೆ. ಹಾಗಾಗಿ ವಿದ್ಯಾರ್ಥಿನಿಗಳ ಮೂಲಕ ವೈಜ್ಞಾನಿಕ ಅರಿವು ಮೂಡಿಸುವ ಕೆಲಸವನ್ನು ಇಂದಿನಿಂದ ಪ್ರಾರಂಭ ಮಾಡಿದ್ದೇವೆ. ಎರಡು ದಿನಗಳ ಕಾಲ ನಡೆಯುವ ಈ ವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ನಾಳೆ ಜಾಥಾ ನಡೆಸಿ ಸಾರ್ವಜನಿಕರು ದಿನ ನಿತ್ಯದಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ವಿಜ್ಞಾನ ವೇದಿಕೆ ಸಂಚಾಲಕರಾದ ಜ್ಯೋತಿ ಡಿ.ಕೆ. ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಎರಡು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೊದಲ ದಿನ ಅರಿವು ಹಾಗೂ ನಾಳೆ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಂಜರಾಜು ಸಿ. ಎನ್, ಜೈಪ್ರಕಾಶ್ ಎ. ಸಿ, ಪ್ರೋ. ಜಯಲಕ್ಷ್ಮಿ. ರವಿಕಿರಣ್ ಕೆ. ಪಿ, ಹೇಮಲತಾ ಎಸ್. ಪಿ, ಪ್ರದೀಪ್ ಕುಮಾರ್ ಎಸ್ ಪರೀಕ್ಷೆ ನಿಯಂತ್ರಣಾಧಿಕಾರಿ ರವಿಕಾಂತ್ ಬಿ. ಲಮಾಣಿ ಉಪಸ್ಥಿತರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಜಿಲ್ಲಾಧಿಕಾರಿ

ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಹಾಗೂ ಕಾಮಗಾರಿಗಳಿಗೆ ಆದ್ಯತೆ ನೀಡಿ : ಡಾ ಕುಮಾರ್

ಮೋತಿ ಯೋಜನೆಗೆ ಚಾಲನೆ

Leave a Comment