NEWS

ಈಸ್ಟ್ ಇಂಡಿಯಾ ಕಂಪನಿ ಎರಡನೇ ಬಾರಿಗೆ ಬಾಗಿಲು ಮುಚ್ಚಿದೆ

ಮತ್ತೆ ಇತಿಹಾಸ ಸೇರಿದ ಈಸ್ಟ್ ಇಂಡಿಯಾ ಕಂಪನಿ

ಪಾಲನೆ ನ್ಯೂಸ್

ಲಂಡನ್: ಒಂದು ಕಾಲದಲ್ಲಿ ಭಾರತವನ್ನೇ ಆಳಿದ್ದ ಈಸ್ಟ್ ಇಂಡಿಯಾ ಕಂಪನಿ ಎರಡನೇ ಬಾರಿಗೆ ಬಾಗಿಲು ಮುಚ್ಚಿದೆ. ಭಾರತೀಯ ಉದ್ಯಮಿ ಸಂಜೀವ್ ಮೆಹ್ರಾ 2010ರಲ್ಲಿ ಈ ಹೆಸರಿನ ಹಕ್ಕುಗಳನ್ನು ಖರೀದಿಸಿ ಲಂಡನ್‌ನಲ್ಲಿ ಐಷಾರಾಮಿ ಲೈಫ್‌ಸ್ಟೈಲ್ ಬ್ರಾಂಡ್ ಆಗಿ ಮರುಚಾಲನೆ ನೀಡಿದ್ದರು. ಆದರೆ, ಈಗ ಈ ಕಂಪನಿ 10 ಕೋಟಿ ರೂ.ನಷ್ಟು ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿಯಾಗಿದೆ.

ಲಂಡನ್‌ನ ಪ್ರತಿಷ್ಠಿತ ಮೇಫೇರ್‌ನಲ್ಲಿರುವ ಈ ಕಂಪನಿಯ THE EAST INDIA COMPANY ಮನಿ ಮಳಿಗೆ ಈಗ ಖಾಲಿಯಾಗಿದ್ದು, ಬಾಡಿಗೆಗೆ ಲಭ್ಯವಿದೆ ಎಂದು ವರದಿಯಾಗಿದೆ. ಈಸ್ಟ್ ಇಂಡಿಯಾ ತನ್ನ ನೌಕರರ ವೇತನ ಮತ್ತು ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಲಿಕ್ವಿಡೇಶನ್ ಪ್ರಕ್ರಿಯೆಗೆ ಒಳಪಟ್ಟಿದೆ. ಭಾರತವನ್ನು ಆಳಿದ್ದ ಕಂಪನಿಯನ್ನು ಭಾರತೀಯನೇ ಆಳುತ್ತಿದ್ದಾನೆ ಎಂದು ಈ ಹಿಂದೆ ಸಂಭ್ರಮಿಸಲಾಗಿತ್ತು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಈ ಐತಿಹಾಸಿಕ ಹೆಸರಿನ ಹೊಸ ಅಧ್ಯಾಯವೂ ಈಗ ಅಂತ್ಯಗೊಂಡಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ

ಮರ ಸಂರಕ್ಷಣಾ ಸಮಿತಿ ರಚನೆಗೆ ಮೈಸೂರು ಗ್ರಾಹಕರ ಪರಿಷತ್ ನಿಯೋಗ ಮನವಿ

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ 

Leave a Comment