NEWS

ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಜಿಲ್ಲಾ ಕಸಾಪ ಅಭಿನಂದನೆ ಇಂದು ಸಂಜೆ

ಪಾಲನೆ ನ್ಯೂಸ್‌

ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಪುಸ್ತಕಪ್ರೇಮಿ ಅಂಕೇಗೌಡರಿಗೆ ಅಭಿನಂದನಾ ಸಮಾರಂಭವನ್ನು ಇಂದು ಸಂಜೆ ೪ ಗಂಟೆಗೆ ನಗರದ ಗಾಂಧಿಭವನದಲ್ಲಿ  ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರವಿಕುಮಾರ್‌ಗೌಡ ನಡೆಸಿಕೊಡಲ್ಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಜಯಪ್ರಕಾಶಗೌಡ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಅವರು ಅಭಿನಂಧಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ  ಎಂ.ವಿ. ಧರಣೇಂದ್ರಯ್ಯ, ತೈಲೂರು ವೆಂಕಟಕೃಷ್ಣ, ಪ್ರೊ. ಜಿ.ಟಿ. ವೀರಪ್ಪ, ಡಿ.ಪಿ. ಸ್ವಾಮಿ, ಹೆಚ್.ವಿ. ಜಯರಾಮು ಭಾಗವಹಿಸಲಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಇರಾನ್‌ನ ನಾಯಕ ಅಯತ್ತೊಲ್ಲಾ ಅಲಿ ಖಮೇನಿ ಸಾವಿಗೆ ಭಾರತ ಸಂತಾಪ

ಎಲ್‌ಪಿಜಿ ಕೊರತೆ ಬಗ್ಗೆ ಜನರು ಗಾಬರಿಪಡುವ ಅಗತ್ಯವಿಲ್ಲ

ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದ ಜಿ.ಪಂ. ಸಿಇಒ ನಂದಿನಿ

Leave a Comment