NEWS

ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ: ಯದುವೀ‌ರ್

ಪಾಲನೆ ನ್ಯೂಸ್

ಮೈಸೂರು: ಕಾಂಗ್ರೆಸ್ ಪಕ್ಷದೊಳಗಿನ ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಂಸದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕುರ್ಚಿ ಕಾದಾಟ ಕಾಂಗ್ರೆಸ್ ಆಂತರಿಕ ವಿಚಾರ.

ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮದವರು ಏನು ಹೇಳುತ್ತಾರೋ ಅಷ್ಟೇ ಗೊತ್ತಿರುವುದು. ಆದರೆ, ಕಾದಾಟದಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ತಿ.ನರಸೀಪುರದಲ್ಲಿ ಕೆಎಸ್‌ಐಸಿ ಭೂಮಿಯನ್ನು ಕ್ರೀಡಾಂಗಣಕ್ಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಕೆಎಸ್‌ಐಸಿ ಜಾಗವನ್ನು ಕೆಎಸ್‌ಐಸಿ ಅಭಿವೃದ್ಧಿಗೆ ಬಳಸಬೇಕು. ಇದು ನಮ್ಮ ಒತ್ತಾಯ, ಈ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಶಿಯಾಗಳ ಪ್ರತಿಭಟನೆ

ಏ.8ರಂದು ಇಲ್ಲವೇ ಏ. 10ರಂದು ದ್ವಿತೀಯ ಪಿಯು ರಿಸಲ್ಟ್

ಸಮಗ್ರ ನಾಗರಿಕ ಸೇವಾ ಕೇಂದ್ರಗಳ ಮೂಲಕ ಇ-ಸ್ವತ್ತು ಅರ್ಜಿ

Leave a Comment