NEWS

ಭಾರತ ಸೆಮಿ ತಲುಪುವುದು ಖಚಿತವಿಲ್ಲ!

ದ.ಆಫ್ರಿಕಾ ಕೊನೆ 2 ಪಂದ್ಯದಲ್ಲಿ ಗೆದ್ದರಷ್ಟೇ ಭಾರತಕ್ಕೆ ಲಾಭ ಆಫ್ರಿಕಾ 1 ಸೋತೂ ನೆಟ್‌ರನ್‌ರೇಟ್‌ನಲ್ಲಿ ಭಾರತದ ಭವಿಷ್ಯ

ಪಾಲನೆ ನ್ಯೂಸ್

ನವದೆಹಲಿ: ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ದ ಹೀನಾಯವಾಗಿ ಸೋತಿರುವ ಭಾರತ ತನ್ನ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಿದೆ.

ನೆಟ್ ರನ್‌ರೇಟ್(-3.800) ಕೂಡಾ ಪಾತಾಳಕ್ಕೆ ಕುಸಿದಿರುವ ಕಾರಣ ಭಾರತ ಇನ್ನುಳಿದ 2 ಪಂದ್ಯ (ವಿಂಡೀಸ್, ಜಿಂಬಾಬೈ ವಿರುದ್ಧ) ಗೆದ್ದರೂ ಸೆಮಿಫೈನಲ್‌ ತಲುಪುವುದು ಖಚಿತವಿಲ್ಲ. ‘ಎ’ ಗುಂಪಿನಲ್ಲಿ 4 ತಂಡಗಳಿವೆ. ಇದರಲ್ಲಿ ಸೆಮಿಫೈನಲ್‌ಗೇರುವುದು ಅಗ್ರ-2 ತಂಡಗಳು. ಭಾರತ ಉಳಿದ 2 ಪಂದ್ಯ ಗೆದ್ದರೆ 4 ಅಂಕಗಳಾಗುತ್ತದೆ. ಅತ್ತ ದ.ಆಫ್ರಿಕಾ ತನ್ನ ಕೊನೆ 2 ಪಂದ್ಯಗಳಲ್ಲಿ ವಿಂಡೀಸ್ ಹಾಗೂ ಜಿಂಬಾಬೈಯನ್ನು ಸೋಲಿಸಿದರೆ, ಆಗ ದ.ಆಫ್ರಿಕಾ(6 ಅಂಕ), ಭಾರತ(4 ಅಂಕ) ಸುಲಭದಲ್ಲಿ ಸೆಮಿಫೈನಲ್ ತಲುಪಲಿವೆ.

ಆದರೆ ದ.ಆಫ್ರಿಕಾ 1 ಪಂದ್ಯದಲ್ಲಿ ಸೋತರೂ ಭಾರತದ ಭವಿಷ್ಯ ನೆಟ್ ರನ್‌ರೇಟ್ ನಲ್ಲಿ ನಿರ್ಧಾರವಾಗಲಿದೆ. VIDIA INDIA ಜಿಂಬಾಬ್‌ವಿರುದ್ಧಗೆದ್ದಿದ್ದರಿಂದವೆಸ್ಟ್‌ಇಂಡೀಸ್ ಗೆ 2 ಅಂಕ ಸಿಕ್ಕಿದೆ. ವಿಂಡೀಸ್ ಇನ್ನು ಭಾರತ ವಿರುದ್ದ ಸೋತು, ದ.ಆಫ್ರಿಕಾ ವಿರುದ್ಧ ಗೆದ್ದರೆ ಲೆಕ್ಕಾಚಾರ ಉಲ್ಟಾ ಆಗಲಿದೆ. ಆಗ ಭಾರತ, ದ.ಆಫ್ರಿಕಾ, ವಿಂಡೀಸ್ ತಂಡಗಳ ಅಂಕ ತಲಾ 4 ಆಗಲಿದ್ದು, ನೆಟ್ ರನ್‌ರೇಟ್‌ನಲ್ಲಿ ಮುಂದಿರುವ ತಂಡ ಸೆಮೀಸ್ ತಲುಪಲಿವೆ. ಈ ಲೆಕ್ಕಚಾರ ಭಾರತ 2ರಲ್ಲಿ ಗೆದ್ದರೆ ಮಾತ್ರ. 2ರ ಪೈಕಿ ಒಂದರಲ್ಲಿ ಸೋತರೂ ಭಾರತ ಹೊರಬೀಳುವುದು ಖಚಿತ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿ

ವಕೀಲೆ ಆದ ದೀದಿ!

ತೆರಿಗೆ ವಸೂಲಾತಿಯಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸಿ: ಕೆ.ಆರ್ ನಂದಿನಿ

Leave a Comment