ಪಾಲನೆ ನ್ಯೂಸ್
ಬೆಂಗಳೂರು : ಒಟ್ಟು ಶೇ.50 ಮೀಸಲಾತಿ ಮಿತಿಯಲ್ಲೇ 53 ಸಾವಿರ ನೇರ ನೇಮಕಾತಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬೆನ್ನಲ್ಲೇ ಮೊದಲ ಹಂತದಲ್ಲಿ 24,300 ಹುದ್ದೆ ತುಂಬಲು ಸರ್ಕಾರ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ನೀಡಿರುವ ಅನುಮೋದನೆಗೆ ಸಂಬಂಧಿಸಿದಂತೆ ಮಾರ್ಚ್ 2ನೇ ವಾರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆಯಲ್ಲಿ ಅತ್ಯಧಿಕ 6,847 ನೇಮಕಾತಿ ವಿವಿಧ ಹಂತದ ಹುದ್ದೆಗಳಿಗೆ ಪ್ರತ್ಯೇಕವಾಗಿ ಅಥವಾ ಸಮೂಹವಾಗಿ ಅಧಿಸೂಚನೆ ಪ್ರಕಟಿಸಲು ಅವಕಾಶ ಇದೆ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲಾಖೆಗಳು ತಡ ಮಾಡದೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸರ್ಕಾರ ಶೇ.50 ಮೀಸಲಾತಿ ಮೀರದಂತೆ ಆದೇಶ ಹೊರಡಿಸಿ ನಿರ್ದೇಶನ ನೀಡಲಿದ್ದು ಬಳಿಕ ಇಲಾಖೆಗಳು ಪರೀಕ್ಷಾ ಘಟಕಗಳಿಗೆ ಅಧಿಸೂಚನೆ ಹೊರಡಿಸಲು ಕೋರಲಿವೆ. ನಂತರ ಅರ್ಜಿ ಆಹ್ವಾನ ಪ್ರಕ್ರಿಯೆ ನಡೆಯುವುದು.
ಈ ಬಾರಿಯ ನೇಮಕಾತಿ ಪಟ್ಟಿಯಲ್ಲಿ ಸಾರಿಗೆ ಇಲಾಖೆಯು ಹೆಚ್ಚಿನ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ವಿಶೇಷವಾಗಿದೆ. ಒಟ್ಟು 6,847 ಹುದ್ದೆಗಳ ಭರ್ತಿಗೆ ಇಲ್ಲಿ ಅವಕಾಶ ನೀಡಲಾಗಿದ್ದು, ಇದರಲ್ಲಿ ಸಿ- ದರ್ಜೆಯ ಹುದ್ದೆಗಳು ಸಿಂಹಪಾಲು ಹೊಂದಿವೆ. O ಪುಟ 2 ನೇಮಕಾತಿ ಸದ್ದು ಮೀಸಲಾತಿ ಜಿದ್ದು

ಬೆಂಗಳೂರು: ಖಾಲಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿರುವುದು ನಿರುದ್ಯೋಗಿ ಯುವಜನತೆಗೆ ಸಂತಸ ಮೂಡಿಸಿರುವ ಹೊತ್ತಲ್ಲೇ ‘ಸಮುದಾಯದ ಕೋಪ’ ಮತ್ತು ‘ಒಳ ಮೀಸಲು ಪಾಲಿಸಬೇಕೆಂಬ ಹಠ’ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಯಾವುದೇ ಸಮುದಾಯ ಸರ್ಕಾರದ ತೀರ್ಮಾನದ ವಿರುದ್ಧ ಬಹಿರಂಗ ಕೋಪತಾಪ ಪ್ರದರ್ಶಿಸಬಾರದೆಂಬ ಕಾರಣಕ್ಕೆ ಖುದ್ದು ಸಚಿವರುಗಳೇ ಅಖಾಡಕ್ಕಿಳಿದು ಮನವೊಲಿಕೆ ಕಸರತ್ತು ಆರಂಭಿಸಿದ್ದಾರೆ. ಈ ನಡುವೆ ಸಮುದಾಯವಾರು ಪ್ರಮುಖರ ಸಭೆ ಕೂಡ ನಡೆದಿದ್ದು, ಅಭಿಪ್ರಾಯಗಳು ಇನ್ನೆರೆಡು ದಿನಗಳಲ್ಲಿ ಹೊರ ಬೀಳಲಿದೆ.
ಕಲ್ಯಾಣದಲ್ಲಿ ಶೇ.80 ನೇಮಕ 371 ಜೆ ಕಲ್ಯಾಣ ಕರ್ನಾಟಕದ ವೃಂದದಡಿ ಖಾಲಿ ಇರುವ 32,132 ಹುದ್ದೆಗಳ – ಪೈಕಿ ಶೇ.80 ಹುದ್ದೆ ನೇಮಕ ಮಾಡಲು ಆರ್ಥಿಕ ಇಲಾಖೆಯಿಂದ ‘ಪರಿಭಾವಿತ ಸಹಮತಿ ಇದೆ. ಅಂದರೆ ಇಲಾಖೆಗಳು ಅಧಿಸೂಚನೆ ಹೊರಡಿಸಿ ನಂತರ ಅನುಮತಿ ಪಡೆದುಕೊಳ್ಳಬಹುದಾಗಿದೆ. ಒತ್ತಡ ಹೇರಲು ಅಭಿಯಾನ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿವೆ, ಆದರೆ ಇಲಾಖೆಗಳು ನಿಧಾನಗತಿ ಧೋರಣೆ ತಾಳಬಾರದು ಎಂಬ ಕಾರಣಕ್ಕೆ ಉದ್ಯೋಗಾಕಾಂಕ್ಷಿಗಳು ಅಭಿಯಾನ ನಡೆಸಲು ಉದ್ದೇಶಿಸಿದ್ದಾರೆ. ಅಂದರೆ ಹಣಕಾಸು ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವ ಇಲಾಖೆಗಳ ಪ್ರಧಾನ ಕಾರ್ಯದರ್ಶಿಯನ್ನು ಉದ್ಯೋಗಾಕಾಂಕ್ಷಿಗಳ ತಂಡ ಖುದ್ದು ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
