NEWS

ವಿವಿಧ ಜಲಸಾಹಸ ಕ್ರೀಡೆಗಳ ಆರಂಭಕ್ಕೆ ಚಾಲನೆ

ಪಾಲನೆ ನ್ಯೂಸ್

ರಾಮನಗರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಿಡದಿಯ ನಲ್ಲಿಗುಡ್ಡ ಕೆರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಬೋಟಿಂಗ್, ಪೆಡಲ್ ಬೋಟ್, ಕಯಾಕಿಂಗ್, ಸೈಕಲಿಂಗ್, ಮೋಟಾರ್ ಬೋಟ್, ಸ್ಪೀಡ್ ಬೋಟ್ ಸೇರಿದಂತೆ ಜಲಸಾಹಸ ಕ್ರೀಡೆಗಳಿಗೆ ಫೆ.೧೮ರ ಬುಧವಾರ ಸಾರಿಗೆ, ಮುಜರಾಯಿ ಇಲಾಖೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ಶಾಸಕರಾದ ಎಸ್. ರವಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಿ.ಎನ್. ನಟರಾಜು ಗಾಣಕಲ್ ಅವರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಬಿಡದಿ ಪುರಸಭೆ ಅಧ್ಯಕ್ಷರಾದ ಭಾನುಪ್ರಿಯಾ ಎಚ್.ಆರ್., ಬಿಡದಿ ಪುರಸಭೆ ಉಪಾಧ್ಯಕ್ಷರಾದ ಆಯಿಷಾ, ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಜಿಲ್ಲಾ ನಗರಾಭಿವೃದ್ದಿ
ಕೋಶದ ಯೋಜನಾ ನಿರ್ದೇಶಕ ಶೇಖರ್ ಜಿ.ಡಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಬಿಡದಿ ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಮೀನಾಕ್ಷಿ, ಎಸ್ಕೇಪ್ ಟು ಎಕ್ಸ್ಪ್ಲೋರ್‌ನ ವ್ಯವಸ್ಥಾಪಕರಾದ ಸ್ವಾಮಿ, ಮನು ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಮತ್ತು ಕುವೆಂಪು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ:ಡಾ.ಕುಮಾರ

ಜ.26 ರಂದು ಗಾಂಧಿಭವನ ಉದ್ಘಾಟನೆ ಸಮಾರಂಭ

ತಂಬಾಕು ನಿಯಂತ್ರಣ ಕುರಿತು ಆದರ್ಶ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ

Leave a Comment