ಪಾಲನೆ ನ್ಯೂಸ್
ಪಿರಿಯಾಪಟ್ಟಣ: ಕಾಡ್ಡಿಚ್ಚಿನಿಂದ ವನ್ಯಜೀವಿಗಳು ನಾಶ ಹೊಂದುವುದಲ್ಲದೆ ಅರಣ್ಯವೂ ನಾಶವಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಡಿಆರ್‌ಎಫ್ ಒ ಪಾರ್ವತಿ ತಿಳಿಸಿದರು.
ಪಿರಿಯಾಪಟ್ಟಣದ ಕಂಪಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ಕಾಡ್ಡಿಚ್ಚು ಜಾಗೃತಿ ಕಲಾತಂಡದ ಬೀದಿನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ನಾಶದಿಂದ ಗ್ರಾಮಸ್ಥರಿಗೆ ಹೆಚ್ಚು ನಷ್ಟವಾಗಲಿದ್ದು, ಮಳೆ, ಬೆಳೆ ಮತ್ತು ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಕಾಡುಗಳನ್ನು ರಕ್ಷಿಸುವುದು ಎಲ್ಲಾ ನಾಗರಿಕರ ಜವಾಬ್ದಾರಿ ಎಂದರು.

ಕಾಡಿನ ಬದಿಯಲ್ಲಿ ಸಂಚರಿಸುವಾಗ ಧೂಮ ಪಾನ ಮಾಡುವುದು, ಕಸಕ್ಕೆ ಬೆಂಕಿಹಾಕುವುದು ಮುಂತಾದವುಗಳನ್ನು ಮಾಡಬಾರದು. ಅಲ್ಲದೆ ಕಾಡ್ಡಿಚ್ಚು ಕಂಡು ಬಂದ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತಂದು, ಸಾಧ್ಯವಾದರೆ ಅದನ್ನು ನಂದಿಸುವ ಕೆಲಸದಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು. ಕೆ.ಆರ್.ನಗರದ ಕುಂಬಾರಕೊಪ್ಪಲಿನ ಜಾಗೃತಿ ಕಲಾ ತಂಡದಿಂದಕಾಡ್ಡಿಚ್ಚುಜಾಗೃತಿನಾಟಕವನ್ನು ಪ್ರದರ್ಶಿಸಲಾಯಿತು.ಕಲಾತಂಡದಲ್ಲಿ ಮಹದೇವ ಸ್ವಾಮಿ, ಶಿವಕುಮಾರ್, ಧರ್ಮ, ಸುಭಾಷ್, ಸಂತೋಷ್ ಭಾಗವಹಿಸಿದ್ದರು. ಉಪಅರಣ್ಯ ಸಂಕರಣಾಧಿಕಾರಿ ಕಿರುಬಾನಂದನ್ ನಿರ್ದೇ ಶನದಲ್ಲಿ ಆರ್‌ಎಫ್‌ಒ ಪದ್ಮಶ್ರೀ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಬೆಂಕಿಯಿಂದಾಗುವ ಅವಘಡಗಳ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕರಾದ ಸಂತೋಷ್ ಲಮಾಣಿ, ವೀರೇಶ್, ನಟರಾಜ್, ಮತ್ತಿತರರು ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

