NEWS

ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಕೋಲಾರದಲ್ಲಿ


ಬೆಂಗಳೂರು: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಮೋದಿ ನಿರ್ಮಾಣಗೊಂಡಿರುವ ಟಾಟಾ ಅಡ್ವಾನ್ಸ್ ಏರೋಸ್ಪೇಸ್ ತಯಾರಿಕಾ ಘಟಕಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಹೆಲಿಕಾಪ್ಟರ್ ಜೋಡಣಾ ಘಟಕವು ಭವಿಷ್ಯದಲ್ಲಿ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಈ ಯೋಜನೆ ಜಾರಿಯಾಗಿದೆ.

ಸಿಂಗಲ್ ಎಂಜಿನ್‌ ಎಚ್-125 ಹೆಲಿಕಾಪ್ಟರ್‌ಗೆ ಈ ಘಟಕದಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಹೆಲಿಕಾಪ್ಟರ್‌ನ ಮ್ಯಾಕ್ರಾನ್ ಕವಚ, ವೈರಿಂಗ್, ನಿಯಂತ್ರಣ ವ್ಯವಸ್ಥೆ, ಎಂಜಿನ್ಅಳವಡಿಕೆ ಮತ್ತು ಏವಿಯಾನಿಕ್ಸ್ ಉಪಕರಣಗಳ ಜೋಡಣೆ ಜತೆಗೆ ಅತ್ಯಾಧುನಿಕ ಗುಣಮಟ್ಟದ ಪರೀಕ್ಷೆಗಳೂ ಘಟಕದಲ್ಲಿ ನಡೆಯಲಿವೆ. ಇಲ್ಲಿ ತಯಾರಾಗುವ ಹೆಲಿಕಾಪ್ಟರ್‌ಗಳು ವಿವಿಧ ರಾಷ್ಟ್ರಗಳಿಗೆ ರಫ್ತಾಗಲಿವೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪೌತಿ ಖಾತೆ ಆಂದೋಲನವನ್ನು ಚುರುಕುಗೊಳಿಸಲು ಮತ್ತು ಕೆಲಸವನ್ನು ಸುಲಭಗೊಳಿಸಲು ಲ್ಯಾಪ್ ಟ್ಯಾಪ್ ವಿತರಣೆ

ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್ 4 ರವರೆಗೆ ಆಚರಣೆ

ಪರೀಕ್ಷಾ ಮುಗಿದ ದಿನವೇ ಫಲಿತಾಂಶ ಪ್ರಕಟಿಸಿದ ಮಹಿಳಾ ಸರ್ಕಾರಿ ಕಾಲೇಜು( ಸ್ವಾಯತ್ತ ) ಮಂಡ್ಯ

Leave a Comment