NEWS

ಶಿಕ್ಷಕರ ಸೇವೆ ಸಮಾಜಕ್ಕೆ‌ ಅಮೂಲ್ಯವಾದದ್ದು

ಪಾಲನೆ ನ್ಯೂಸ್

ಹುಣಸೂರು: ತಾಲ್ಲೂಕಿನ ಧರ್ಮಾಪುರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಮುಖಂಡರಾದ ಡಿ.ಕೆ.ಕುನ್ನೇಗೌಡ ಅವರು 2 ಸದೃಢ ಸಮಾಜ ನಿರ್ಮಾಣವಾಗುವಲ್ಲಿ ಶಿಕ್ಷಕರು ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಾಗಬೇಕಾದರೆ ಶಿಕ್ಷಕರ ನಿರಂತರ ಅಮೂಲ್ಯವಾದದ್ದು. ಉತ್ತಮ ಶಿಕ್ಷಕರು ಎಲ್ಲಿರುತ್ತಾರೆ ಅಲ್ಲಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ತಿಳಿಸಿದರು.

ಸೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಮಹದೇವ್ ಮಾತನಾಡಿ, ಎಲ್ಲಾ ಸೇವೆಗಳಿಗಿಂತ ಶಿಕ್ಷಕ ಸೇವೆ ಶ್ರೇಷ್ಠವಾದದ್ದು. ಶಿಕ್ಷಕರಾಗಬೇಕಾದರೆ ಅವರಲ್ಲಿ ಅರ್ಹತೆಯ ಜೊತೆಗೆ ತಾಳ್ಮೆ, ಸಹನಾ ಗುಣ ಹೊಂದಿರಬೇಕು. ಸದಾ ಮಕ್ಕಳನ್ನು ಆಕರ್ಷಿಸಿತರಬೇಕು. ಮಕ್ಕಳನ್ನು ತಿದ್ದುವ ಗುಣ ಮೈಗೂಡಿಸಿಕೊಂಡಿರಬೇಕು ಎಂದರು. ನಂತರ ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸರ್ಕಾರದ ವತಿಯಿಂದ 50,000 ರೂ. ಗಳ ಚೆಕ್ ನ್ನು ಮುಖ್ಯ ಶಿಕ್ಷಕರು ವಿತರಿಸಿದರು.

ಉದ್ಯಮಿ ಮಹೇಶ್ ಮಾತನಾಡಿ, ಶಾಲೆಗೆ ಸಿಸಿಟಿವಿ ಅಳವಡಿಸಿಕೊಡುವೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 5000 ನಗದನ್ನು ನೀಡುತ್ತೇವೆಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕ ನವೀನ್ ಕುಮಾರ್ ರವರನ್ನು ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಸುರೇಶ್, ನಾಯಕ, ಮುಖಂಡರಾದ ಮಹದೇವ ಶೆಟ್ಟಿ, ಮಹೇಶ್, ತಿಮ್ಮಯ್ಯ, ಜವರನಾಯಕ, ಕೆಂಡಗಣಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಮುಖ್ಯ ಶಿಕ್ಷಕರಾದ ಸತೀಶ್, ರಾಣಿ ಹಾಗೂ ಸಹಶಿಕ್ಷಕರು ಇದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಎಐ ಹೊಡೆತಕ್ಕೆ ಐಟಿ ಆದಾಯ ಕುಂಟಿತ

ಕೀಲಾರದಲ್ಲಿ ರಾಜಸೂಯ ಯಾಗ ಪೌರಾಣಿಕ ನಾಟಕ ಪ್ರದರ್ಶನ

180 ಅಪ್ರಾಪ್ತ ಬಾಲಕಿಯರನ್ನ ಲೈಂಗಿಕವಾಗಿ ಶೋಷಿಸಿದ್ದಲ್ಲದೆ 350 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಯುವಕನ ಸೆರೆ

Leave a Comment