NEWS

ಜಿಲ್ಲಾ ಕೋರ್ಟ್ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಪಾಲನೆ ನ್ಯೂಸ್


ಮಂಡ್ಯ: ಮಂಡ್ಯ, ಕೊಡಗು, ಬೆಂ.ದಕ್ಷಿಣ, ದಾವಣಗೆರೆ, ಹಾವೇರಿ, ಕಾರವಾರ ಜಿಲ್ಲಾ ಕೋರ್ಟ್, ಧಾರವಾಡ ಪೀಠಕ್ಕೆ ಬೆದರಿಕೆ ಮಡಿಕೇರಿ/ಮಂಡ್ಯ/ಬೆಂಗಳೂರು: ಕೊಡಗು, ಮಂಡ್ಯ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದ್ದು, ಸೋಮವಾರ ಅಧಿಕಾರಿ ಗಳು ವ್ಯಾಪಕ ಶೋಧಕಾರ್ಯ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.


ಮುಂಜಾಗ್ರತಾ ಕ್ರಮವಾಗಿ ಕೊಡಗು, ಮಂಡ್ಯ, ರಾಮನಗರದಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯ, ಕಾರವಾರ, ಹಾವೇರಿ, ದಾವಣಗೆರೆ ಜಿಲ್ಲಾ ನ್ಯಾಯಾಲಯಗಳು, ಧಾರವಾಡದಲ್ಲಿರುವ ಉಚ್ಚ ನ್ಯಾಯಾಲಯ ಪೀಠದ ಕಟ್ಟಡಗಳಿಂದ ವಕೀಲರು ಮತ್ತು ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋಧಕಾರ್ಯ ನಡೆಸಲಾಯಿತು. ಭದ್ರತಾ ಸಿಬ್ಬಂದಿ ಆವರಣವನ್ನು ಸುತ್ತುವರಿದು ಕೊಡಗು ಜಿಲ್ಲಾ ಕೋರ್ಟ್ ಆವರಣದಲ್ಲಿ ಶ್ವಾನದಳದಿಂದ ತಪಾಸಣೆ ಮಾಡಲಾಯಿತು.

ಆವರಣ ತೆರವು ಮಾಡಿ ತಪಾಸಣೆ: ಹುಸಿ ಬೆದರಿಕೆ ಎಂಬುದು ಸಾಬೀತು

ಸಂಪೂರ್ಣ ತಪಾಸಣೆ ನಡೆಸಿದರು ಎಂದು ಪೊಲೀಸರು ತಿಳಿ ಸಿದ್ದಾರೆ. ಬಾಂಬ್ ಸ್ಟಾಡ್ ಸಿಬ್ಬಂದಿ ಕೂಡ ಘಟನಾ ಸ್ಥಳ ಗಳಲ್ಲಿ ಪರಿಶೀಲನೆ ನಡೆಸಿದರು. ಮಂಡ್ಯ ವರದಿ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ, ನ್ಯಾಯಾಧೀಶರು, ವಕೀಲರು ಮತ್ತು ದಾವೆದಾರರನ್ನು ಆವರಣದಿಂದ ಹೊರಗೆ ಕಳುಹಿಸಲಾಯಿತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚೌಟ್ರಿ ಮಾಲೀಕ ಬಾಲ್ಯವಿವಾಹಕ್ಕೆ ಹೊಣೆಗಾರನಲ್ಲ ಹೊಣೆಗಾರನಲ್ಲ

ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಶಿಯಾಗಳ ಪ್ರತಿಭಟನೆ

Leave a Comment