NEWS

ಟಿ-20 ವಿಶ್ವಕಪ್: ಚೊಚ್ಚಲ ಪಂದ್ಯ ಗೆದ್ದ ಇಟಲಿ

ಪಾಲನೆ ನ್ಯೂಸ್

ಮುಂಬೈ: ವಾಂಖೇಡೆ ಮೈದಾನದಲ್ಲಿ ಬುಧವಾರ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಇಟಲಿ ತಂಡ ಭರ್ಜರಿ ಗೆಲುವು ಸಾಧಿಸಿ ವಿಶ್ವದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ನೇಪಾಳ ನೀಡಿದ್ದ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ ಅತ್ಯಂತ ಕಳಪೆ ಪ್ರದರ್ಶನ ನೀಡಿತು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಇಟಲಿ ತಂಡ ನೇಪಾಳವನ್ನು 123 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ನೇಪಾಳ ಪರ ಆರಿಫ್ ಶೇಖ್ ಮಾತ್ರ 27 ರನ್ ಗಳಿಸಿ ಹೈಸ್ಕೋರ‌ರ್ ಎನಿಸಿಕೊಂಡರು. ಆಸಿಫ್ ಶೇಖ್ (20), ರೋಹಿತ್ ಪೌಡೆಲ್ (23), ದಿಪೇಂದ್ರ ಸಿಂಗ್ ( 17), ಕರಣ್ ಕೆಸಿ (18) ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು. ಇಟಲಿ ಪರ ಕ್ರಿಷನ್ ಕಲುಗಮಗೆ 3 ವಿಕೆಟ್ ಪಡೆದುಕೊಂಡರೆ, ಬೆನ್ ಮನೇ 2, ಜೆಜೆ ಸ್ಟಟ್, ಅಲಿ ಹಸನ್ ಮತ್ತು ಜಸ್ಟೀತ್ ಸಿಂಗ್ ತಲಾ 1 ವಿಕೆಟ್ ಪಡೆದುಕೊಂಡರು.

ಈ ಗುರಿಯನ್ನು ಬೆನ್ನತ್ತಿದ ಇಟಲಿ ಪರ ಜಸ್ಟಿನ್ ಮೊಸ್ಟಾ ಮತ್ತು ಆಂಟೋನಿ ಮೊಸ್ಕಾ ಸಹೋದರರು ಅಜೇಯ ಇನ್ನಿಂಗ್ಸ್ ಆಡಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಜಸ್ಟಿನ್ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 60 ರನ್ ಕಲೆಹಾಕಿದರೆ ಆಂಟೊನಿ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿದರು. ಇದರೊಂದಿಗೆ ತಂಡ 10 ಮೊದಲ ಪಂದ್ಯದಲ್ಲೇ ಗೆಲುವು ಈ ಗೆಲುವಿನೊಂದಿಗೆ ಇಟಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಇದರ ಜೊತೆಗೆ, ಟಿ-20 ವಿಶ್ವಕಪ್ ಪದಾರ್ಪಣೆ ಟೂರ್ನಿಯಲ್ಲಿ 10 ವಿಕೆಟ್ ಗಳಿಂದ ಜಯಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಟಲಿ ಪಾತ್ರವಾಗಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಕ್ರಿಶನ್ ಕಲುಗಮಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

53ನೇ ಜನ್ಮದಿನವನ್ನು ಫ್ಯಾನ್ಸ್ ಜತೆ ಆಚರಿಸಿಕೊಂಡ ತೆಂಡುಲ್ಕರ್

Leave a Comment