NEWS

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಪಾಲನೆ ನ್ಯೂಸ್

ಯಾದಗಿರಿ: ಸಾರಾಯಿ ಕುಡಿಯುವುದನ್ನು ಮಗಳು ಆಕ್ಷೇಪಿಸಿದ್ದಕ್ಕೆ ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ರಾಕ್ಷಸಿ ಕೃತ್ಯ ಇಲ್ಲಿನ ರಾಜೀವಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿ. ಆಕೆಯ ತಾಯಿ ನಿರ್ಮಲಾ ಕೊಲೆ ಆರೋಪಿ.

ಮದ್ಯ ಸೇವಿಸುವ ಅಭ್ಯಾಸವಿದ್ದ ನಿರ್ಮಲಾಸೋಮವಾರ ಮಧ್ಯಾಹ್ನ ಮನೆಗೆ ಕುಡಿದು ಬಂದಿದ್ದಾಳೆ. ಕುಡಿದು ಬಂದಿದ್ದಕ್ಕೆ ಪ್ರತಿಭಾ ಆಕ್ಷೇಪಿಸಿದ್ದಾಳೆ. ಆಗ ತಾಯಿ ಮಗಳ ನಡುವೆ ವಿಪರೀತ ಜಗಳ ನಡೆದಿದ್ದು

ಮೊದಲೇ ಪಾನಮತ್ತಳಾಗಿದ್ದ ನಿರ್ಮಲಾ ಆಕ್ರೋಶಗೊಂಡು, ಮಗಳನ್ನು ಕತ್ತು ಹಿಸುಕಿ ಉದ್ದೇಶಪೂರ್ವಕವಾಗಿ ಕೊಲೆ‌ ಮಾಡಿದ್ದಾಳೆಂದು ದೂರಲಾಗಿದೆ.

ಮಗಳನ್ನು ಕೊಂದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ನಿರ್ಮಲಾ ಯತ್ನಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ಬಾಲಕಿ ಕುತ್ತಿಗೆಯಲ್ಲಿ ಬೆರಳಿನ ಗುರುತು ಪತ್ತೆಯಾಗಿದೆ. ಈ ಬಗ್ಗೆ ವಿಚಾರಿಸಿದಾಗ ಕೊಲೆ ವಿಷಯ ಬಯಲಾಗಿದೆ. ನಾಲ್ವರು ಹೆಣ್ಣು ಮಕ್ಕಳ ತಾಯಿ ನಿರ್ಮಲಾಗೆ ಪತಿ ಇರಲಿಲ್ಲ ಎನ್ನಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

18 ವರ್ಷದೊಳಗಿನವರಿಗೆ ಬಾಲಾಪರಾಧಿಯಡಿ ಸಮಾನ ಶಿಕ್ಷೆ

ಪ್ರತಿ ಸೋಮವಾರ ತಹಸೀಲ್ದಾರ್, ಇಓ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ಕುಡಿಯುವ ನೀರಿನ ಸಮನ್ವಯ ಸಮಿತಿ ಸಭೆ ನಡೆಸಲು ಜಿ.ಪಂ. ಸಿಇಓ ಸೂಚನೆ

ಮಾ.28ಕ್ಕೆ ಐಪಿಎಲ್ ಶುರು

Leave a Comment