NEWS

ವಿಧಾನ ಸೌಧದ ಮರ ಕತ್ತರಿಸಿದ ರೈತ! ತನ್ನ ಮರ ಕಡಿದಿದ್ದಕ್ಕೆ ಶ್ರೀಗಂಧ ರೆಂಬೆ ಕಟ್

ಬಿಗಿಭದ್ರತೆಯ ಸೌಧ ಬಳಿಯೇ ಶ್ರೀಗಂಧ ರೆಂಬೆ ಕಟ್

ಪಾಲನೆ ನ್ಯೂಸ್

ಬೆಂಗಳೂರು: ಹೆದ್ದಾರಿ ನಿರ್ಮಾಣಕ್ಕೆ ತಮ್ಮ ತೋಟದಲ್ಲಿ ತೆರವುಗೊ ಳಿಸಿದ್ದ ಶ್ರೀಗಂಧದ ಮರಗಳಿಗೆ ಪರಿಹಾರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸೌಧ ಹೊರಾವರಣದಲ್ಲಿರುವ ಶ್ರೀಗಂಧದ ಮರದ ಕೊಂಬೆ ಕಡಿದು ಮಂಗಳವಾರ ರಾಜ್ಯ ಶ್ರೀ ಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್‌.ವಿಶು ಕುಮಾರ್‌ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.

ವಿಧಾನಸೌಧ ಪಶ್ಚಿಮ ಪ್ರವೇಶ ದ್ವಾರ ಸಮೀಪದಲ್ಲಿದ್ದ ಶ್ರೀಗಂಧದ ಮರದ ಕೊಂಬೆಯನ್ನು ಮಧ್ಯಾಹ್ನ 12.30ರ ಸುಮಾರಿಗೆ ವಿಶುಕುಮಾ‌ರ್ ಕಡಿದಿದ್ದಾರೆ. ಕೂಡಲೇ ಅವರನ್ನು ಭದ್ರತೆಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆತಂದಿದ್ದಾರೆ. ನಂತರ ಅವರ ವಿರುದ್ದ ಅರಣ್ಯ ಕಾಯ್ದೆಯಡಿ ವಿಧಾನಸೌಧ ಠಾಣೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ.

ವಿಧಾನಸೌಧ ಹೊರಾವರಣದಲ್ಲಿರುವ ಶ್ರೀಗಂಧದ ಮರದ ಕೊಂಬೆ ಕಡಿದು ಮಂಗಳವಾರ ಟಿ.ಎನ್‌. ವಿಶು ಕುಮಾ‌ರ್ ಪ್ರತಿಭಟನೆ ನಡೆಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಮತ್ತು ಶೂನ್ಯಕ್ಕೆ ತರುವಂತೆ ಅಗತ್ಯ ಕ್ರಮ ವಹಿಸಿ – ಡಾ. ಕುಮಾರ

ನಟಿ ತಮನ್ನಾಈಗ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿ

ಕೃಷಿಗೆ ಬೀಜವೇ ಮೂಲಾಧಾರ – ದೇಸಿ ಬೀಜ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆಗೆ ರೈತರು ಒತ್ತು ನೀಡಬೇಕು : ಡಾ. ಕೆ. ಸಿ. ನಾರಾಯಣಸ್ವಾಮಿ

Leave a Comment