NEWS

ಆರ್‌ಸಿಬಿ ಪಂದ್ಯ ಬಗ್ಗೆ ಚಿನ್ನಸ್ವಾಮಿಯಲ್ಲಿ ನಾಡಿದ್ದು ಅಂತಿಮ ನಿರ್ಧಾರ?

ಗೃಹ ಸಚಿವರ ಜೊತೆ ಕೆಎಸ್‌ಸಿಎ, ಆರ್‌ಸಿಬಿ ಮಾತುಕತೆ

ಪಾಲನೆ ನ್ಯೂಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತನ್ನ ಐಪಿಎಲ್ ಪಂದ್ಯಗಳನ್ನು ಆಡುವ ಬಗ್ಗೆ ಫೆ.12 ರಂದು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಈ ಬಗ್ಗೆ ಗೃಹ ಸಚಿವ ಡಾ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಸೋಮವಾರ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ವಕ್ತಾರ ವಿನಯ್ ಮೃತ್ಯುಂಜಯ ಆರ್‌ಸಿಬಿ ಅಧಿಕಾರಿಗಳನ್ನು ಗೃಹ ಸಚಿವರ ಬಳಿಗೆ ಕರೆದೊಯ್ದು ಮಾತುಕತೆ ನಡೆಸಿದಾರೆ.

ಇದರ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಪರ ಮೇಶ್ವರ್, ‘ಚಿನ್ನಸ್ವಾಮಿಯಲ್ಲಿ ಅಗತ್ಯ ಸುರಕ್ಷತೆ ಕೈಗೊಳ್ಳುವ ಕುರಿತಂತೆ ನ್ಯಾ.ಕುನ್ಹಾ ಅವರ ವರದಿಯ ಶಿಫಾರಸು, ಜಿಬಿಎ ಮತ್ತು ಪೊಲೀಸ್ ಆಯುಕ್ತರ ನೇತೃತ್ವದ ಸಮಿತಿಯ ಶಿಫಾರಸು ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಫೆ.12ರಂದು ಸಭೆ ನಡೆಸಿ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾ ಗುವುದು’ ಎಂದಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

‘ಇ-ಟಿಂಗ್ ಮತ್ತು ಇ-ನೋಸ್’ ನಿಂದ ತಿರುಪತಿ ತುಪ್ಪದ ಗುಣಮಟ್ಟ ಪರೀಕ್ಷೆ

ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ

ಯುವ ನಿಧಿ ಯೋಜನೆಯ ನೋಂದಣಿ ಕಾರ್ಯಕ್ರಮ

Leave a Comment