NEWS

ಡಬ್ಲ್ಯುಪಿಎಲ್: ಎರಡನೇ ಬಾರಿ ಆರ್‌ಸಿಬಿ ಚಾಂಪಿಯನ್

ಪಾಲನೆ ನ್ಯೂಸ್

ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ (ಡಬ್ಲ್ಯು,ಪಿಎಲ್) 2026 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ತಂಡದ ವಿರುದ್ಧ 6 ವಿಕೆಟ್ ಗಳಿಂದ ಗೆದ್ದು ಸತತ 2 ನೇ ಬಾರಿಗೆ ಡಬ್ಲ್ಯು ಪಿಎಲ್ ಕಪ್‌ನ್ನು ತನ್ನ ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ತಂಡ ಡೆಲ್ಲಿ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 203 ರನ್ ಗಳಿಗೆ ಕಟ್ಟಿ ಹಾಕಿತು. ಉತ್ತಮ ರನ್ ಟಾರ್ಗೆಟ್ ನ್ನು ಬೆನ್ನಟ್ಟಿದಆರ್ ಸಿಗೆ ಗ್ರೇಸ್ ಹ್ಯಾರೀಸ್ 7 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್ ನತ್ತ ನಡೆದಿದ್ದು ಆರಂಭಿಕ ಆಘಾತವಾಗಿತ್ತು. ಆದರೆ ಸ್ಮೃತಿ ಮಂಧಾನ 42 ಎಸೆತಗಳಲ್ಲಿ 87 ರನ್ ಹಾಗೂ ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 79 ರನ್ ಗಳಿಸಿದ್ದು ತಂಡದ ಗೆಲುವಿಗೆ ಭದ್ರ ಬುನಾದಿಯಾಯಿತು. ಕ್ರೀಸ್ ನಲ್ಲಿದ್ದ ನಡಿನ್ ಡಿಕ್ಲರ್ಕ್, ರಾಧಾ ಯಾದವ್ ತಂಡವನ್ನು ಗೆಲುವಿನ ದಡ ಸೇರಿಸಿದರು. ರನ್ ಚೇಸಿಂಗ್ ನಲ್ಲಿ ಆರ್ ಸಿಬಿ ಇತಿಹಾಸ ನಿರ್ಮಾಣ ಮಾಡಿದ್ದು, 19.4 ಓವರ್ ಗಳಲ್ಲಿ 204 ರನ್ ಗಳಿಸಿದ್ದು, ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸಿಂಗ್ ದಾಖಲೆ ನಿರ್ಮಿಸಿದೆ.

ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಆರ್ ಸಿಬಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಮೊದಲು ಫೈನಲ್ಸ್ ಪ್ರವೇಶಿಸಿ ಟ್ರೋಫಿಯನ್ನೂ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು

ತಮಿಳುನಾಡು ರಾಜಕೀಯದ ಈ ಬಿಕ್ಕಟ್ಟಿನ ಕುರಿತು ಕಮಲ್ ಹಾಸನ್ ಪೋಸ್ಟ್

ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಹಾಗೂ ಕಾಮಗಾರಿಗಳಿಗೆ ಆದ್ಯತೆ ನೀಡಿ : ಡಾ ಕುಮಾರ್

Leave a Comment