NEWS

ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿಗೆ ಚಾಲನೆ

ಪಾಲನೆ ನ್ಯೂಸ್

ನವದೆಹಲಿ: 2 ತಿಂಗಳ ಪ್ರಾಯೋಗಿಕ ಕಾರ್ಯಾಚರಣೆಯ ಬಳಿಕ ವಿಶ್ವದ ಮೊದಲ ಮತ್ತು ಅತಿದೊಡ್ಡ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಲಿದ್ದಾರೆ. ಪ್ರಸ್ತುತ ದೆಹಲಿ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಈ ಸೇವೆ 2 ವರ್ಷಗಳಲ್ಲಿ ದೇಶವ್ಯಾಪಿ ಲಭಿಸಲಿದೆ. ಇದು, ಓಲಾ, ಉಬರ್, ರಾಪಿಡೋಗೆ ನೇರ ಸ್ಪರ್ಧಿಯಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಶಾ ಈಗಾಗಲೇ ಸೇವೆ ನೀಡುತ್ತಿರುವ 6 ಚಾಲಕರನ್ನು ಸನ್ಮಾನಿಸಲಿದ್ದು, ಸಾರಥಿಯೇ ಮಾಲೀಕ ಎಂಬ ಆಶಯದಡಿ ಅವರಿಗೆ ಷೇರು ಪ್ರಮಾಣಪತ್ರವನ್ನು ನೀಡಲಿದ್ದಾರೆ. ಅವರಿಗೆ 5 ಲಕ್ಷ ರು. ಅಪಘಾತ ವಿಮೆ, ಅಷ್ಟೇ ಮೊತ್ತದ ಕುಟುಂಬ ಆರೋಗ್ಯ ವಿಮೆ ಸಿಗಲಿದೆ.

ಬರಲಿದ್ದಾರೆ ಬೈಕ್‌ ದೀದೀ!

ಭಾರತ್ ಟ್ಯಾಕ್ಸಿ ಅಡಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲು ‘ಬೈಕ್ ದೀದೀ’ ಎಂಬ ಯೋಜನೆ ಜಾರಿಗೆ ತರ ಲಾ ಗಿದ್ದು, 150 ಮಹಿಳಾ ಚಾಲಕಿಯರು ಇದನ್ನು ಸೇರಿಕೊಂಡಿದ್ದಾರೆ.

ಏನಿದು ಭಾರತ್‌ ಟ್ಯಾಕ್ಸಿ?

ಕಳೆದ ಜೂ.6ರಂದು ಸ್ಥಾಪಿಸಲಾಗಿರುವ ಭಾರತ್ ಟ್ಯಾಕ್ಸಿ, ಪ್ರಯಾಣಿಕರಿಂದ ಕಮಿಷನ್ ಪಡೆಯದೆ, ಸರ್ಜ್ ಮಾದರಿ ಯನ್ನೂ (ಬೇಡಿಕೆ ಹೆಚ್ಚಿದ್ದಾಗ ದರ ಏರಿಕೆ) ಅಳವಡಿಸಿ ಕೊಳ್ಳದೆ ಕಾರ್ಯನಿರ್ವಹಿಸುವ ಸರ್ಕಾರಿ ವೇದಿಕೆ. 8 ಸಹ ಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಕೆಲಸ ಆರಂಭಿಸಿರುವ ಇದಕ್ಕೆ ಈಗಾಗಲೇ 3 ಲಕ್ಷ ಸಾರಥಿಗಳು ಸೇರಿಕೊಂಡಿದ್ದಾರೆ. 1 ಲಕ್ಷ ಜನ ನೋಂದಾಯಿಸಿಕೊಂಡಿದ್ದು, 10,000ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. ಲಾಭವನ್ನು ನೇರವಾಗಿ ಚಾಲಕರಿ ನೀಡುವ ನಿಯಮವಿದ್ದು, ಈಗಾಗಲೇ 10 ಕೋಟಿ ರು. ಮೊತ್ತವನ್ನು ವರ್ಗಾಯಿಸಲಾಗಿದೆ. ಜತೆಗೆ ಅವರಿಗೆ ಆರೋಗ್ಯ, ಅಪಘಾತ ವಿಮೆ, ನಿವೃತ್ತಿ ಉಳಿತಾಯದಂತಹ ವ್ಯವಸ್ಥೆಗಳಿ ಸಿಗಲಿವೆ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ : ಜಿ.ಪಂ ಸಿಇಓ ಸೂಚನೆ

ಕೆಲಸ ಯಾವುದೇ ಆದರೂ ಸರಿ ಎಲ್ಲರೂ ಶಿಕ್ಷಣ ಪಡೆಯುವುದು ಕಡ್ಡಾಯವಾಗಿರಬೇಕು: ಗಂಗಾಧರಸ್ವಾಮಿ

ಒಂದು ಸಣ್ಣ ಬೀಜದ ಉಂಡೆಗಳು ದೊಡ್ಡ ಅರಣ್ಯದ ಸೃಷ್ಟಿಗೆ ಮುನ್ನುಡಿ ಬರೆಯುತ್ತವೆ

Leave a Comment