NEWS

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ಗೆ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

ಪಾಲನೆ ನ್ಯೂಸ್

ವಾಷಿಂಗ್ಟನ್: ದೀರ್ಘಕಾಲದ ಯೋಜಿತ ಚಟುವಟಿಕೆಗಳ ಭಾಗವಾಗಿ ಉತ್ತರ ಅಮೆರಿಕದ ಮಿಲಿಟರಿ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿವೆ ಎಂದು ಅಮೆರಿಕ-ಕೆನಡಾ ಉತ್ತರ ಅಮೆರಿಕ ವಾಯು ರಕ್ಷಣಾ ಕಮಾಂಡ್ (ಎನ್‌ಒಆರ್‌ಎಡಿ) ತಿಳಿಸಿದೆ.

ನಾರ್ತ್ ಅಮೆರಿಕ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಯುದ್ಧ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನ ಪಿಟುಫಿಕ್ ನೆಲೆಯಲ್ಲಿ ಬಂದಿಳಿಯಲಿದೆ ಎಂದು ಅದು ಹೇಳಿದೆ.

ಈ ಚಟುವಟಿಕೆಗಳನ್ನು ಅಮೆರಿಕ, ಕೆನಡಾ ಹಾಗೂ ಕಿಂಗ್ಲಮ್ ಆಫ್‌ ಡೆನ್ಮಾರ್ಕ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಕುರಿತು ಗ್ರೀನ್‌ಲ್ಯಾಂಡ್ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ಎನ್‌ಒಆರ್‌ಎಡಿ ಹೇಳಿದೆ.

ಸ್ವಾಯತ್ತ ಗ್ರೀನ್‌ಲ್ಯಾಂಡ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆಯ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕಾಡ್ತಿಚ್ಚು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ : ಖಂಡ್ರೆ

ಚೆನ್ನೈ ಹಾಗೂ ಮುಂಬೈ 2ನೇ ಬಾರಿ ಮುಖಾಮುಖಿ

ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ

Leave a Comment