NEWS

ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಾಡಿಗೆ ಹಿತ

ಪಾಲನೆ ನ್ಯೂಸ್

ಮಂಡ್ಯ: ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗಬೇಕು ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ. ಎಸ್.ಪೊನ್ನಣ್ಣ ಹೇಳಿದರು.

ಕೊಡವ ಸಮಾಜ ಸಭಾಂಗಣದಲ್ಲಿ  ಭಾನುವಾರ ಬಿಲ್ಲವ ಸಮುದಾಯದವರು ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಮನರಂಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡು ಸುಭಿಕ್ಷೆ ಹಾಗೂ ಸಮೃದ್ಧಿಯಾಗಬೇಕಾದರೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಡಿನ ಪ್ರತಿಯೊಂದು ಸಮುದಾಯದವರಿಗೆ ಅವರದ್ದೇಯಾದ ಜಾಗವಿರುವ ಅವಶ್ಯಕತೆಯನ್ನು ತಾನು ಮನಗಂಡು ಬಿಲ್ಲವ ಸಮಾಜದವರ ಮನವಿಗೆ ಮನ್ನಣೆ ನೀಡಿ ಈ ಜಾಗವನ್ನು ಮಂಜೂರು ಮಾಡಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ನಂತರ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಮನರಂಜನ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ನಾಯಕರು ಹಾಗೂ ಬಿಲ್ಲವ ಸಮಾಜದ ಮುಖಂಡ ಅಪ್ಪು ರವೀಂದ್ರ, ವಿಖ್ಯಾತನಂದ ಸ್ವಾಮೀಜಿ, ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ, ಕೆಪಿಸಿಸಿ ಸದಸ್ಯರಾದ ರಮಾನಾಥ್ ಬೇಕಲ್, ಹರೀಶ್ ಕುಮಾರ್ ಹಾಗೂ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೆಳ್ಳಿ ಬೆಲೆ 1,500 ರೂ. ಏರಿಕೆ

ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ: ರವಿಕುಮಾರ್

ರಂಗೋಲಿ ಕೇವಲ ಚುಕ್ಕೆ- ಗೆರೆ- ಬಣ್ಣಗಳ ಚಿತ್ತಾರವಲ್ಲ: ಕೆ.ಟಿ. ಹನುಮಂತು

Leave a Comment