NEWS

ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ ಸರ್ವಸದಸ್ಯರ ಸಭೆ

ಪಾಲನೆ ನ್ಯೂಸ್

ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಜಯಪ್ರಕಾಶ್‌ಗೌಡ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ ಸರ್ವಸದಸ್ಯಸರ ಸಭೆಯನ್ನು ಉದ್ಘಾಟಿಸಿದರು.

ಮಂಡ್ಯ: ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘದ ಪ್ರಥಮ ಸರ್ವಸದಸ್ಯರ ಮಹಾಸಭೆ ನಗರದ ಗಾಂಧಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಜಯಪ್ರಕಾಶ್‌ಗೌಡ ನೆರವೇರಿಸಿದರು.

ಅಧ್ಯಕ್ಷತೆಯನ್ನು ಸಂಘದ ಮುಖ್ಯ ಪ್ರವರ್ತಕರಾದ ಡಿ.ಪಿ. ಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಬಿ.ವಿ. ನಂದೀಶ್‌ ಆಗಮಿಸಿದ್ದರು.

ಪ್ರವರ್ತಕ ಮಂಡಳಿಯ ಸದಸ್ಯರಾದ ಕೆ.ಎನ್.‌ ಮಹದೇವ, ಕೆ.ಜೆ. ಸುರೇಶ್‌, ಮಂಜುನಾಥ್‌, ಶ್ರೀಧರ್‌, ಸ್ವಾಮಿ, ಮಂಜುಳ, ಹೆಚ್.‌ ಆರ್.‌ ಧನ್ಯಕುಮಾರ್‌, ಭಾರತಿ, ಟಿ.ಸಿ. ಸವಿತ, ಕೆ.ಜಿ. ರಮೇಶ್‌, ಸಿ.ಎನ್.‌ ಮಂಜೇಶ್‌, ಚಂದ್ರನಾಯಕ, ಡಾ. ಸಿ. ಸುಂದರೇಶ್‌, ಹಾಗೂ ಸಿ.ಎಸ್.‌ ಕುಮಾರ್‌ ಅವರು ಕಾಯ್ರಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಸಹಕಾರ ಸಂಘಕ್ಕೆ ಜಿಲ್ಲೆಯಾದ್ಯಂತ ಕಲಾವಿದರು ಸದಸ್ಯರಾಗಿದ್ದು, ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

Related posts

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ.

ಇರಾನಿಯನ್ನರು ಬಲವಂತಕ್ಕೆ ಮಣಿಯುವುದಿಲ್ಲ

ಇಂದು ಎಂಆರ್‌ಎಂ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

Leave a Comment