NEWS

ಮಂಡ್ಯದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಮೇ 13ಕ್ಕೆ

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಮಾನಸ ಉದ್ಘಾಟನೆ ; ಲೇಖಕ, ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಅವರ ನಿವಾಸದಲ್ಲಿ ಕಾರ್ಯಕ್ರಮ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ: ಜನರಲ್ಲಿ ಪುಸ್ತಕಗಳ ಓದಿನ ಲಾಭದ ಅರಿವು ಮೂಡಿಸಲು ಹಾಗೂ ಪುಸ್ತಕ ಸಂಸ್ಕೃತಿ ಹರಡಲು ಕನ್ನಡ ಪುಸ್ತಕ ಪ್ರಾಧಿಕಾರ ನಗರದ ಶಂಕರನಗರದ ಚಂದಗಾಲು ಲೇಔಟ್ ನಲ್ಲಿ ಮೇ 13ರಂದು ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಆಯೋಜಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮವು ಲೇಖಕ, ಹಿರಿಯ ಪತ್ರಕರ್ತ  ಚಂದ್ರಶೇಖರ ದ.ಕೋ.ಹಳ್ಳಿ ಅವರ ನಿವಾಸದಲ್ಲಿ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಕಾರ್ಯಕ್ರಮ ಉದ್ಘಾಟಿಸುವರು.

ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹದೇವ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೇಖಕಿ ಹೆಚ್.ಆರ್.ಕನ್ನಿಕ, ಶಿಕ್ಷಕ ಕೊತ್ತತ್ತಿ ರಾಜು ಭಾಗವಹಿಸುವರು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಗೃತ ಸಮಿತಿ: ಕನ್ನಡ ಪುಸ್ತಕ ಪ್ರಾಧಿಕಾರದ ಮಂಡ್ಯ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ. ಎಂ.ಕೆಂಪಮ್ಮ, ಮಂಜು ಮುತ್ತೇಗೆರೆ, ಡಾ. ಶುಭಶ್ರೀ ಪ್ರಸಾದ್,  ಚಂದ್ರಶೇಖರ ದ.ಕೋ ಹಳ್ಳಿ, ಮಂಚಶೆಟ್ಟಿ ಎಂ, ಉಮೇಶ ದಡಮಹಳ್ಳಿ, ಅನಿಲ್‌ಬಾಬು,  ಶಿವಕುಮಾರ್ ಆರಾಧ್ಯ, ದೇವರಾಜು ಎಸ್. ಪಂಡಿತ್, ವಾಸು, ಕುಮಾರ್, ಜಿ.ವಿ. ದೇವರಾಜು, ಅನಿಲ್ ಕುಮಾರ್, ಸದ್ದಾಂ ತಗ್ಗಹಳ್ಳಿ ಹಾಗೂ ಪುಸ್ತಕ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Related posts

ಯುಎಇನಲ್ಲಿ 3 ಭಾರತೀಯರಿಗೆ ಗಾಯ

ನಾರಿ ಶಕ್ತಿಗೆ ಕಾನೂನಿನ ಅರಿವು ಅಗತ್ಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸುಬ್ರಹ್ಮಣ್ಯ ಜೆ.ಎನ್ ಅಭಿಪ್ರಾಯ

ಹೊಸ ಪಯಣ ಶುರು ಮಾಡಿದ ಸಿಂಧು

Leave a Comment