ಪಾಲನೆ ನ್ಯೂಸ್
ಮಂಡ್ಯ : ಕವಿ,ಲೇಖಕಿ ಹಾಗೂ ಲಿಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂದರಾ ಕದಲೂರು ಅವರ ವಿಶೇಷ ಆಸಕ್ತಿಯ ಫಲವಾಗಿ ಮದ್ದೂರು ತಾಲ್ಲೋಕು ಚಾಮನಹಳ್ಳಿ ಗ್ರಾಮದ ಡಾ.ಬಾಬು ಜಗಜೀವನರಾಂ ಯುವಕ ಸಂಘದ ಸದಸ್ಯರಿಗೆ ಚರ್ಮವಾದ್ಯ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಒಂದು ತಿಂಗಳು ನಡೆದ ಕಾರ್ಯಾಗಾರದಲ್ಲಿ ತರಬೇತಿ ಪಡೆದ ಕಲಾವಿದರಿಗೆ ಪ್ರಮಾಣಪತ್ರ ವಿತರಣೆ ಹಾಗೂ ತಂಡಕ್ಕೆ ಚರ್ಮವಾದ್ಯಗಳನ್ನು ಹಸ್ತಾಂತರಿಸಲಾಯಿತು.
ಸೋಮವಾರ ಸಂಜೆ ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಜನಪದ ಕಲೆ, ಕಲಾವಿದರ ಬಗ್ಗೆ ವಸುಂದರಾ ಅವರು ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ.ಪಿ.ಸ್ವಾಮಿಯವರು ಸಮಾರೋಪ ನುಡಿಗಳನ್ನಾಡಿ ಹೊಸ ತಂಡಕ್ಕೆ ಶುಭ ಕೋರಿದರು.
ದಕ್ಷತೆ ಮತ್ತು ಸಾಂಸ್ಕೃತಿಕ ಮನಸ್ಸಿನ ಅಧಿಕಾರಿಗಳಿಗೆ ಮಾತ್ರ ಇಂತಹ ಆಲೋಚನೆ ಬರುವುದು.ಇವರ ಈ ಕಾರ್ಯದಿಂದ ಒಂದು ಜನಪದ ಕಲೆ ಪುನಶ್ಚೇತನ ಗೊಂಡಿದಲ್ಲದೆ ಒಂದಷ್ಟು ಯುವಕರಿಗೆ ಉದ್ಯೋಗ ಸೃಷ್ಟಿಯನ್ನು ಮಾಡಿಕೊಟ್ಟಿದೆ ಎಂದು ಸಂಘಟಕ ಕೀಲಾರ ಕೃಷ್ಣೇಗೌಡ ತಿಳಿಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
