NEWS

ಮಕ್ಕಳಿಗೆ ಗಮಕದ ಅರಿವು ಅಗತ್ಯ : ವಿ. ಸುಜಾತ ಕೃಷ್ಣ

ಪಾಲನೆ ನ್ಯೂಸ್

ಮಂಡ್ಯ : ಇಂದಿನ ಮಕ್ಕಳಿಗೆ, ಯುವ ಜನರಿಗೆ ಮಹಾ ಕಾವ್ಯಗಳ ಕುರಿತು ಅರಿವು ಮೂಡಿಸುವ ಅಗತ್ಯತೆ ಇದ್ದು ಗಮಕದ ಮೂಲಕ ಜಾಗೃತಿ ಮೂಡಿಸಬೇಕು ಎಂದು. ಡ್ಯಾಪೋ ಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಗಮಕಿ ವಿ. ಸುಜಾತಾ ಕೃಷ್ಣ ಅಭಿಪ್ರಾಯಿಸಿದರು.


ಅವರು ಮಂಡ್ಯದ ಶಂಕರ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನ ದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಮಂಡ್ಯ ಜಿಲ್ಲಾ ಗಮಕ ಕಲಾ ಪರಿಷತ್ ಘಟಕ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ದೇವಸ್ಥಾನ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗಮಕ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಆದಿ ಕವಿ ವಾಲ್ಮೀಕಿ ಯಿಂದ ಆರಂಭವಾದ ಗಮಕ ಕಲೆ ಭಾರತೀಯ ಸಂಸ್ಕೃತಿಯ ಅಸ್ಮಿತೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಹಾಗೂ ಪ್ರತಿಯೊಬ್ಬ ನಾಗರಿಕರದ್ದಾಗಿದೆ. ಎಂದರು.
ಬಾಲ್ಯದಿಂದಲೇ ಮಕ್ಕಳಿಗೆ ಕಾವ್ಯ ವಾಚನ ಮತ್ತು ಕಲೆಗಳ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಿದರೆ ದೇಶದ ಸಮಾಜದ ಸತ್ ಪ್ರಜೆಯಾಗಲು ಉತ್ತಮ ಅಡಿಪಾಯ ಹಾಕಿಕೊಟ್ಟಂತಾಗುತ್ತದೆ. ಇದು ನಮೆಲ್ಲರ ಹೊಣೆಗಾರಿ ಕೂಡಾ ಎಂದರು.

ಸಂಗೀತ, ಗಮಕ ಲಲಿತ ಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸಿ ದೇಶಕ್ಕೆ ಉತ್ತಮ ಕೊಡುಗೆಗಳನ್ನಾಗಿ ರೂಪಿಸುತ್ತದೆ ಎಂದು ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೊಬೈಲ್ ಸೇರಿದಂತೆ ಅತ್ಯಾಧುನಿಕ ಡಿಜಿಟಲ್ ಪಿಡುಗಿನಿಂದ ಹೊರ ಬರಲು ಸಮಾಜ ಮುಖಿಯಾಗಿ ಮಕ್ಕಳನ್ನು ವಿದ್ಯಾರ್ಥಿ ಹಾಗೂ ಯುವ ಜನರನ್ನು ತೊಡಗಿಸಿಕೊಳ್ಳಲು ಗಮಕ, ಕಾವ್ಯಗಳ ಅರಿವು, ಕಲೆಗಳ ಮಹತ್ವ ಪರಿಚಯಿಸುವಿಕೆ ಅತ್ಯಂತ ಅಗತ್ಯ, ಅನಿವಾರ್ಯ ಎಂದರು.

ದೇಶದ ಗುರುತಿಸುವಿಕೆಗೆ ಅದರ ಸಂಸ್ಕೃತಿ ಕಾರಣ ವಾಗುತ್ತದೆ ಇಂತಹ ಗುಣಮಟ್ಟದ ಕಾರ್ಯಕ್ರಮ ಗಳು ನಿರಂತರವಾಗಿ ನ ಡೆಯಬೇಕು ಆಗ ಮಾತ್ರ ಕಲೆಯ ಬೆಳವಣಿಗೆ ಸಾಧ್ಯ ಎಂದರು. ಕಾರ್ಯಕ್ರಮ ದಲ್ಲಿ ವಿದ್ಯಾಗಣಪತಿ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಶಿವಲಿಂಗೇ ಗೌಡ, ಕಾರ್ಯದರ್ಶಿ ಕೃಷ್ಣಮೂರ್ತಿ ಟ್ರಸ್ಟ್ ನ ಸದಸ್ಯ ಬಸವರಾಜ್ ಕಲಾಶ್ರೀ ಗಮಕಿ ವಿದ್ಯಾಶಂಕರ್, ಉಪಸ್ಥಿತರಿದ್ದರು. ಯುವ ಗಮಕಿ ರಮೇಶ್ ಬಡಿಗೇರ್ ಕುಮಾರವ್ಯಾಸ ಭಾರತದ ಕರ್ಣ ಭೇದನ ಕಾವ್ಯ ಭಾಗವನ್ನು ವಾಚಿಸಿದರು, ಗಮಕಿ ಡಾ. ಎಸ್. ಶ್ರೀನಿವಾಸ ಶೆಟ್ಟಿ ವಿದ್ವತ್ ಪೂರ್ಣ ವ್ಯಾಖ್ಯಾನ ದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಮಕ ಪರಿಷತ್ ನ ಜಿಲ್ಲಾ ಪ್ರತಿನಿಧಿ ಕಲಾಶ್ರೀ ವಿದ್ಯಾಶಂಕರ್ ಎಲ್ಲರನ್ನು ಸ್ವಾಗತಿಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪುನೀತ್‌ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಸಿಎಂ ಸ್ಟಾಲಿನ್ ಸ್ಟಾಂಡ್ ಅಪ್ ಕಾಮೆಡಿಯನ್ ಎಂದು ನಟ ವಿಜಯ್ ವ್ಯಂಗ್ಯ

ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆಗಳು, ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ಡಾ.ಕುಮಾರ

Leave a Comment