NEWS

ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್

ಪಾಲನೆ ನ್ಯೂಸ್

ಬೆಂಗಳೂರು: ಜಿಬಿಎ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿರುವ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಸಿಎಂ ಗೃಹ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು.

ಚುನಾವಣಾ ಆಯೋಗವು ಜಿಬಿಎ ಆಯುಕ್ತರುಗಳ ಜೊತೆಗೆ ನಡೆದ ಸಭೆಯಲ್ಲಿ ಜೂ.14 ರಿಂದ 24ರೊಳಗಾಗಿ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಮಾಡಿರುವ ಹಿನ್ನೆಲೆಯಲ್ಲಿ | ಬಾಕಿ ಕಾಮಗಾರಿ ಮುಗಿಸಲು ಸೂಚನೆ ಪಕ್ಷವನ್ನು ಸಜ್ಜು ಮಾಡಲು ಏನೇನು ಸಿದ್ದತೆಗಳನ್ನು ಮಾಡಬೇಕು ಎಂದು ಚರ್ಚೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗದಲ್ಲಿ ನಡೆದ ಸಭೆಯ ಮಾಹಿತಿಯನ್ನು ಜಿಬಿಎ ಆಯುಕ್ತರುಗಳು, ಸಿಎಂ ಮತ್ತು ಡಿಸಿಎಂ ಅವರಿಗೆ ವಿವರವಾಗಿ ತಿಳಿಸಿದರು. ಚುನಾವಣೆ ದಿನಾಂಕ ಘೋಷಣೆ ಆಗುವ ಮುನ್ನವೇ ಜಿಬಿಎ ವ್ಯಾಪ್ತಿಯಲ್ಲಿ ಇನ್ನೂ ಏನೇನು ಕೆಲಸಗಳು ಆಗಬೇಕಾಗಿದೆ? ಬಾಕಿ ಇರುವ ಕೆಲಸಗಳಿಗೆ ಎಷ್ಟು ಅನುದಾನ ಬೇಕು? ಎನ್ನುವ ಬಗ್ಗೆಯೂ ಚರ್ಚೆ ನಡೆದಿದ್ದು, ಎಲ್ಲಾ ಕಾಮಗಾರಿಗಳನ್ನು ತುರ್ತಾಗಿ ಮುಗಿಸಬೇಕು ಎಂದು ಸಿಎಂ ಸೂಚಿಸಿದರು ಎಂದು ಮೂಲಗಳು ಖಚಿತಪಡಿಸಿವೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಂದೇಮಾತರಂ 150: ಗೀತೆಗೇಕೆ ಅಷ್ಟು ಮಹತ್ವ? ಅರ್ಥ ಗೊತ್ತೇ

ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ : ಬಿ. ಸಿ. ಶಿವಾನಂದಮೂರ್ತಿ

ಮಂಡ್ಯ ಪೊಲೀಸ್‌ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಡಿ.ಎಸ್. ಶ್ರೀಕಂಠ

Leave a Comment