ಪಾಲನೆ ನ್ಯೂಸ್
ಹೊಸದಿಲ್ಲಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳವರೆಗೆ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ನಿರಂತರವಾಗಿರುವುದನ್ನು ಖಚಿತಪಡಿಸಿ ಕೊಳ್ಳಲು, ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿ ಕೊಡಲಾಗಿದೆ. ಇದರಿಂದ ರಷ್ಯಾ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಯೋಜ ವಾಗುವುದಿಲ್ಲ. ಏಕೆಂದರೆ ಇದು ಈಗಾಗಲೇ ಸಮುದ್ರ ಮಾರ್ಗದಲ್ಲಿ ಬಾಕಿ ಉಳಿದಿರುವ ತೈಲಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ಮಾತ್ರ ಅನುಮತಿ ನೀಡುತ್ತದೆ ಎಂದು ಬೆಸೆಂಟ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಭಾರತವು ಅಮೆರಿಕದ ಅತ್ಯಗತ್ಯ ಪಾಲುದಾರ ರಾಷ್ಟ್ರವಾಗಿದ್ದು, ಮುಂಬರುವ ದಿನಗಳಲ್ಲಿ ಅಮೆರಿಕವು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಸಲಿದೆ. ಜಾಗತಿಕ ಇಂಧನ ವ್ಯವಸ್ಥೆಯನ್ನು ಒತ್ತೆ ಇರಿಸಿಕೊಳ್ಳುವ ಇರಾನ್‌ನ ಪ್ರಯತ್ನದಿಂದ ಸೃಷ್ಟಿಯಾಗಿರುವ ಒತ್ತಡವನ್ನು ಈ ತಾತ್ಕಾಲಿಕ ಕ್ರಮವು ಶಮನಗೊಳಿಸಲಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 3ರ ವರೆಗೆ ತೈಲ ಖರೀದಿಸಲು нефть ಅನುಮತಿಸಲಾಗಿದೆ ಎಂದು ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಇರಾನ್ ಮೇಲಿನ ದಾಳಿಯನ್ನು ಅಮೆರಿಕ-ಇಸ್ರೇಲ್ ಹೆಚ್ಚಿಸಿವೆ. ಇರಾನ್ ಕೂಡ ಪ್ರತೀಕಾರ ದಾಳಿ ನಡೆಸುತ್ತಿದೆ. ಇದರ ನಡುವೆ, ಹಡಗುಗಳು ಸಾಗುವ ಪ್ರಮುಖ ಜಲಮಾರ್ಗ ವಾದ ಹೋರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ಇರಾನ್ ಹೇಳಿದೆ. ಹೋರ್ಮುಜ್ ಜಲಸಂಧಿ ನಿರ್ಣಾಯಕ ತೆಗೆದುಕೊಂಡಿರುವುದಾಗಿ ಜಲಮಾರ್ಗವಾಗಿದ್ದು, ಇಲ್ಲಿಂದಲೇ ವಿಶ್ವದ ವಿವಿಧ ರಾಷ್ಟ್ರಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಿಸಲಾಗುತ್ತದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
