NEWS

ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪಾಲನೆ ನ್ಯೂಸ್

ಮಂಡ್ಯ : ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ. ಲಸಿಕೆಯು ಹೆಣ್ಣು ಮಕ್ಕಳಿಗೆ ಪರಿಣಾಮಕಾರಿಯಾದ ಲಸಿಕೆಯಾಗಿದೆ ಎಂದು ಖ್ಯಾತ ಸ್ರೀ ರೋಗ ತಜ್ಞ ಡಾ. ಆರ್.ಮನೋಹರ್ ತಿಳಿಸಿದರು. ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದೊಡನೆ ಮಂಡ್ಯ ತಾಲೂಕು ಕಲ್ಮಂಟಿ ದೊಡ್ಡಿಯಲ್ಲಿ ನಡೆದ ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎಚ್.ಪಿ.ವಿ. ಲಸಿಕೆಯ ಬಗ್ಗೆ ಅಪಪ ್ರಚಾರ ಸಲ್ಲದು. ಇದು ಪರಿಣಾಮಕಾರಿಯಾಗಿ ಇರು ವಂತಹ ದಿವ್ಯೌಷಧವಾಗಿದೆ. ಇದರ ಸದುಪ ಯೋಗವನ್ನು ೧೪ ವರ್ಷದೊಳಗಿನ ಮಹಿಳೆ ಯರು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಮುಟ್ಟಿನ ಕಪ್ಪಿನ ಬಳಕೆಯ ವಿಧಾನಗಳ ಬಗ್ಗೆ ಮಾತನಾಡಿದ ಅವರು, ಮಹಿಳೆಯರು ಸುರಕ್ಷಿತ ಆರೋಗ್ಯದಿಂದಿರಲು ಇದೊಂದು ಉತ್ತಮ ಸಲಕರಣೆಯಾಗಿದೆ. ಇದರ ಉಪ ಯೋಗ ಪಡೆದುಕೊಂಡು ಪ್ಲಾಸ್ಟಿಕ್‌ಮುಕ ್ತ ಸಮಾಜದತ ್ತ ಗಮನ ಹರಿಸಬಹುದಾಗಿದೆ ಎಂದು ತಿಳಿಸಿದರು. ಮಹಿಳೆಯರಲ್ಲಿ ಆಗಿಂದಾಗ್ಗೆ ತಲೆದೋರಿ ರುವ ಮುಟ್ಟಿನ ಸಮಸ್ಯೆಗಳು ಹಾಗೂ ೪೫ರ ನಂತರ ವಿವಿzs À ಅಂಗಾಂಗಗಳ ವೈಫಲ್ಯಗಳನ್ನು ಸೂಚಿಸುತ್ತದೆ.

ಇದನ್ನು ಅರ್ಥೈಸಿಕೊಂಡು ಉತ ್ತಮ ಆರೋಗ್ಯವ್ನನು ಕಾಪಾಡಿಕೊಳ್ಳುವುದು ಅವಶ್ಯಕ ಎಂದರು. ಕ್ಯಾನ ್ಸರ್ ರೋಗ ಲಕ ್ಷಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಕಾಲ ಕಾಲಕ್ಕೆ ಅನುಗುಣವಾಗಿ ಪರೀಕ್ಷೆ ಮತ್ತು ಚಿಕಿತ್ಸೆಯ ಮೊರೆ ಹೋದಲ್ಲಿ ಸುರಕ್ಷಿತ ಆರೋಗ್ಯವನ್ನು ಕಾಪಾಡಿಕೊಳ ್ಳ ಬಹುದು ಎಂದು ಸಲಹೆ ನೀಡಿದರು. ಸ್ರೀ ರೋಗತಜ್ಞೆ ಡಾ.ನೀನಾದ ಮಹಿಳೆ ಯ ರೊಡನೆ ಸಂವಾದ ನಡೆಸಿ ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಮಕ್ಕಳ ಆರೋಗ್ಯದ ಕಾಳಜಿ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಕರ‍್ಯದರ್ಶಿ ಕೆ.ಪಿ.ಅರುಣ ಕುಮಾರಿ, ಎನ್‌ಎಸ್‌ಎಸ್. ಅಧಿಕಾರಿ ಪುಷ್ಪ ಲತಾ, ಎಸ್‌ಡಿಎಂಸಿ ಅಧ್ಯಕ್ಷ ಮಂಜೇಶ್ ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು

ಸೇನಾ ಪರೀಕ್ಷೆ ವೇಳೆ ಅಕ್ರಮ ನಡೆಸಿರುವ 18 ಮಂದಿ ವಿರುದ್ದ ದೂರು

ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ: ರವಿಕುಮಾರ್

Leave a Comment