NEWS

ಕುಕ್ಟ‌ರ್ ಬಾಂಬ್ ಸ್ಫೋಟಿಸಿದ್ದವಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 92 ಸಾವಿರ ರು. ದಂಡ

ಪಾಲನೆ ನ್ಯೂಸ್

ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ‘ಕುಕ್ಕರ್ ಬಾಂಬ್ ಸ್ಪೋಟ’ (ಐಇಡಿ) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್ ಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 92 ಸಾವಿರ ರು. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ವೇಳೆ ಪ್ರಕರಣದ ವಿಚಾರಣೆ ನ್ಯಾಯಾಲಯಕ್ಕೆ ಮೊಹಮ್ಮದ್ ಶಾರೀಕ್ ತಪ್ರೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಪುರಸ್ಕರಿಸಿ ಆತನನ್ನು ದೋಷಿ ಎಂದು ಪರಿಗಣಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲ ಯವು, ಸೋಮವಾರ ಆತನಿಗೆ ಐಪಿಸಿ ಸೆಕ್ಷನ್ 120 ໖, 121 2, 122, 307, 326, 465, 471, ಯುಎಪಿಎ ಕಾಯ್ದೆಯ ಸೆಕ್ಷನ್ 6(ಬಿ), 17, 18, 20, 38, 39, 40 ವಸ್ತುಗಳ ಕಾಯ್ದೆಯ ಸೆಕ್ಷನ್ 3(ಎ), 3(ಎ) ಅಡಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಈಗಾಗಲೇ ಕಳೆದ ಮೂರೂವರೆ ವರ್ಷದಿಂದ ಜೈಲಿನಲ್ಲೇ ಇರುವ ಶಾರೀಕ್, ಬಾಕಿ ಆರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು.

ಬಾಂಬ್ ಇಡುವಾಗ ನೆನಪಾಗದ ತಂದೆ-ತಾಯಿ ಈಗ ನೆನಪು!
ಎನ್‌ಐಎ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ಬಳಿಕ ದೋಷಿ ಮೊಹ ಮೃದ್ ಶಾರೀಕ್ ಭಾವುಕನಾಗಿ ಕಣ್ಣೀರಿಟ್ಟ ಪ್ರಸಂಗ ಜರು ಗಿತು. ‘ನನ್ನ ಕುಟುಂಬ ಶಿವ ಮೊಗ್ಗದಲ್ಲಿದೆ. ತಂದೆ- ತಾಯಿಗೆ ವಯ ಸಾಗಿದೆ. ಅವರು ನನ್ನನ್ನು ನೋಡಲು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬರಲು ಕಷ್ಟವಾಗು ತ್ತಿದೆ. ಹೀಗಾಗಿ ನನ್ನನ್ನು ಶಿವಮೊಗ್ಗ ಜೈಲಿ ಗೆ ವರ್ಗಾವಣೆ ಮಾಡಿ’ ಎಂದು ಮನವಿ ಮಾಡಿದ. ಆದರೆ, ನ್ಯಾಯಾಧೀಶರು ಈ ಮನವಿ ತಿರಸ್ಕರಿಸಿದರು.‌

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಎಲ್ಲರ ಸಹಕಾರದಲ್ಲಿ ಕ.ಸಾ.ಪ. ಕಾರ್ಯಕ್ರಮ : ಕೆ.ಟಿ. ಹನುಮಂತು

ರೈಲುಹಳಿ ಮೇಲೆ ಕೆಟ್ಟು ನಿಂತ ಬಿಎಂಟಿಸಿ

ಪೌತಿ ಖಾತೆ ಆಂದೋಲನವನ್ನು ಚುರುಕುಗೊಳಿಸಲು ಮತ್ತು ಕೆಲಸವನ್ನು ಸುಲಭಗೊಳಿಸಲು ಲ್ಯಾಪ್ ಟ್ಯಾಪ್ ವಿತರಣೆ

Leave a Comment