ಪಾಲನೆ ನ್ಯೂಸ್
ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕದ ಜಾಗದ ಪ್ರಶ್ನೆ ಎತ್ತಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಹೃದಯಭಾಗದಲ್ಲಿ ಸ್ಮಾರಕಕ್ಕೆ ನೀಡಿರುವ ಜಾಗದ ಬಗ್ಗೆ ಚೇತನ್ ಟ್ವಿಟ್ ಮಾಡಿದ್ದಾರೆ.
ನಾವು ರಾಜ್‌ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿ ಸುತ್ತೇವೆ. ಆದರೆ, 2006ರಲ್ಲಿ ಬೆಂಗ ಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಸಂಕೀರ್ಣಕ್ಕಾಗಿ 2.5 ಎಕರೆ ಭೂಮಿಯನ್ನು ನೀಡಿದ್ದು ಎಷ್ಟು ಸಮಂಜಸ? ಸರ್ಕಾರವು ಭೂಮಿಯನ್ನು ಮಂಜೂರು ಮಾಡುವಾಗ ಮತಗಳ ಮೇಲೆ ಕಣ್ಣಿಡುವ ಬದಲು, ದೂರದೃಷ್ಟಿ ಮತ್ತು ಸಾರ್ವ ಜನಿಕ ಉಪಯುಕ್ತತೆಯನ್ನು ಗಮನಿಸಬೇಕು. 21ನೇ ಶತ ಮಾನದ ಭಾರತದಲ್ಲಿ ಭೂಮಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ ಎಂದು ಟ್ವಿಟ್ ಮಾಡಿದ್ದರು.
ಕೇವಲ ಮತ ಬ್ಯಾಂಕ್‌ಗಾಗಿ ಸರ್ಕಾರಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬ ಚೇತನ್ ಅವರ ಪರೋಕ್ಷ ಟೀಕೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ರಾಜ್‌ಕುಮಾರ್ ಅವರು ಕನ್ನಡ ಭಾಷೆಗೆ, ಕೊನೆಗೂ ಕ್ಷಮೆ ಯಾಚನೆ!ಅಣ್ಣಾವ್ರ ಅಭಿಮಾನಿಗಳು ತಮ್ಮ ಮನೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗುತ್ತಲೇ ಪೊಲೀಸರ ಸಮ್ಮುಖದಲ್ಲಿ ಹೊರಗೆ ಬಂದ ನಟ ಚೇತನ್ ಹೋರಾಟಗಾರರ ಕ್ಷಮೆ ಯಾಚಿಸಿದ್ದಾರೆ. ನನ್ನ ಮಾತುಗಳಿಂದ ಕನ್ನಡಿಗರು ಮತ್ತು ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಕೂಡ ಡಾ. ರಾಜ್ ಕುಮಾರ್ ಅವರ ಅಭಿಮಾನಿ. ಆದರೆ ಸಮಾಜದಲ್ಲಿ ಜಾಗೃತಿಯಾಗಬೇಕು.

ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್‌ಕುಮಾರ್ ಅವರು ಕಂಡ ಕನಸಿನ ಚಿತ್ರರಂಗವನ್ನು ನಾವೂ ಕೂಡ ಕಟ್ಟಬೇಕು. ಅದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಚೇತನ್ ಅಹಿಂಸಾಗೆ ನೆನಪು ಮಾಡುವ ಪ್ರಯತ್ನ ಮಾಡಿದ್ದರು. ನಟ ಚೇತನ್ ಮನೆಯ ಮುಂದೆ ಹೈಡ್ರಾಮಾ ಡಾ.ರಾಜ್‌ಕುಮಾರ್ ಅವರ ಸ್ಮಾರಕ ಜಾಗದ ಕುರಿತು ಕೊಂಕು ನುಡಿದಿದ್ದ ನಟ ಚೇತನ್ ಅವರು ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಬೆಂಗಳೂರಿನ ಚೇತನ್ ಮನೆ ಮುಂದೆ ದೊಡ್ಡ ಹೈಡ್ರಾಮಾವೇ ನಡೆಯಿತು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
