NEWS

ಜಪಾನ್‌ನಲ್ಲಿ ಭೂಕಂಪ ಭೀತಿ

ಪಾಲನೆ ನ್ಯೂಸ್

ಟೋಕಿಯೋ: ಉತ್ತರ ಜಪಾನ್‌ನಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂರು ಮೀಟರ್‌ಗೂ ಎತ್ತರದ ಸುನಾಮಿ ಅಲೆಗಳು ಕಡಲ ತೀರವನ್ನು ಅಪ್ಪಳಿಸಬಹುದು ಎಂದು ಎಚ್ಚರಿಸಲಾಗಿದೆ. ಈಗಾಗಲೇ ಅಂದಾಜು ಒಂದು ಮಿಟರ್ ಎತ್ತರದ ಅಲೆಗಳು ಅಪ್ಪಳಿಸಿದ್ದು, ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ 100 2. ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ದೂರದ ಟೋಕಿಯೋವರೆಗೂ ಕಂಪನ ಉಂಟಾಗಿದೆ. ಆದರೆ, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಉತ್ತರ ಹಾಗೂ ಈಶಾನ್ಯ ಕರಾವಳಿ ತೀರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ನಂತರದಲ್ಲಿ ಸುನಾಮಿ ಮುನ್ಸೂಚನೆ ತಗ್ಗಿಸಲಾಯಿತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

5 ವರ್ಷವೂ ಸಿದ್ದರಾಮಯ್ಯ ಸಿಎಂ – ಡಾ.ಯತೀಂದ್ರ ಸಿದ್ದರಾಮಯ್ಯ

ಕಂದಾಯ ಇಲಾಖೆಯಲ್ಲಿ ನೌಕರರು ಒಕ್ಕೊರಲನಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು: ಡಾ.ಕುಮಾರ

ಮೂರು ವರ್ಷಗಳಿಂದ * 8,171 ಕೋಟಿ ಸೈಬರ್ ವಂಚಕರ ಪಾಲಾಗಿದೆ

Leave a Comment