NEWS

ಟೈಟಾನ್ಸ್‌ಗೆ ಇದು 5 ಪಂದ್ಯಗಳಲ್ಲಿ 3ನೇ ಗೆಲುವು

ಪಾಲನೆ ನ್ಯೂಸ್

ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 5ನೇ ಸೋಲನುಭವಿಸಿದೆ. ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್‌ಗೆ 5 ವಿಕೆಟ್ ಸೋಲು ಎದುರಾಯಿತು. ಟೈಟಾನ್ಸ್‌ಗೆ ಇದು 5 ಪಂದ್ಯಗಳಲ್ಲಿ 3ನೇ ಗೆಲುವು.


ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 20 ಓವರ್‌ಗಳಲ್ಲಿ 180 ರನ್‌ ಗೆ ಆಲೌಟಾ ಯಿತು. ಕ್ಯಾಮರೂನ್ ಗ್ರೀನ್ ಏಕಾಂಗಿ ಹೋರಾಟ ನಡೆಸಿ 55 ಎಸೆತಗಳಲ್ಲಿ 79 ರನ್ ಸಿಡಿಸಿದರು. ರಬಾಡ 3, ಸಿರಾಜ್ ಹಾಗೂ ಅಶೋಕ್ ತಲಾ 2 ವಿಕೆಟ್ ಪಡೆದರು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ನಾಯಕ ಶುಬ್‌ಮನ್ ಗಿಲ್ 50 ಎಸೆತಗಳಲ್ಲಿ 86 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ 25 ರನ್ ಕೊಡುಗೆ ನೀಡಿದರು.


ಸ್ಕೋರ್: ಕೋಲ್ಕತಾ 20 ಓವರ್‌ನಲ್ಲಿ 180/10 (ಗ್ರೀನ್ 79, ಪೊವೆಲ್ 27, ರಬಾಡ 3-29, 22-23, № 2-45), ಗುಜರಾತ್ 19.4 ಓವರ್‌ನಲ್ಲಿ 181/5 (ಗಿಲ್ 86, ಬಟ್ಲರ್ 25, ವರುಣ್ 2-34)
ಪಂದ್ಯಶ್ರೇಷ್ಠ: ಶುಭೌಮನ್ ಗಿಲ್.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್‌

ಚಿನ್ನ-ಬೆಳ್ಳಿ ದರ ಜಿಗಿತ

ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Leave a Comment