NEWS

ಪ್ರಧಾನಿ ಮೋದಿ ಮತ್ತು ನನಗೆ ‘ಪತ್ನಿ ಸಮಸ್ಯೆ’ ಇಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಸ್ಯ

ಪಾಲನೆ ನ್ಯೂಸ್

ನವದೆಹಲಿ: ‘ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ‘ಪತ್ನಿ ಸಮಸ್ಯೆ’ ಇಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು.


ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದೇವೆ. ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್‌ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ’ ಎಂದು ಹಾಸ್ಯ ಮಾಡಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪರೀಕ್ಷಾ ಮುಗಿದ ದಿನವೇ ಫಲಿತಾಂಶ ಪ್ರಕಟಿಸಿದ ಮಹಿಳಾ ಸರ್ಕಾರಿ ಕಾಲೇಜು( ಸ್ವಾಯತ್ತ ) ಮಂಡ್ಯ

ವಿಶ್ವಮಾನವ ಧರ್ಮ ಮಹಾಅಧಿವೇಶನದಲ್ಲಿ ಭಾಗವಹಿಸಲು ಕರೆ

ದೇಹ ಪಾಲನೆ

Leave a Comment