NEWS

ಎಕ್ಸ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಒಂದು ‘ಡ್ರಾಫ್ಟ್’ ಪೋಸ್ಟ್

ಪಾಲನೆ ನ್ಯೂಸ್

ಇಸ್ಲಾಮಾಬಾದ್ : ಅಮೆರಿಕ-ಇರಾನ್ ಯುದ್ಧ ನಿಲ್ಲಿಸಿದ ಗುಂಗಿನಲ್ಲಿರುವ ಪಾಕಿಸ್ತಾನದ ನಿಲುವು, ನಿರ್ಧಾರಗಳು ವಿದೇಶ ದಿಂದ(ಅಮೆರಿಕದಿಂದ) ನಿರ್ಧರಿಸಲ್ಪಡುತ್ತಿವೆಯೇ ಎಂಬ ಸಂಶಯ ಉದ್ಭವಿಸಿದೆ. ಈ ಚರ್ಚೆಯನ್ನು ಹುಟ್ಟುಹಾಕಿರುವುದು, ಎಕ್ಸ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಒಂದು ‘ಡ್ರಾಫ್ಟ್’ ಪೋಸ್ಟ್. ಹೋರ್ಮುಜ್ ಜಲಸಂಧಿ ಮೇಲಿನ ನಿರ್ಬಂಧ ತೆರವು ಸೇರಿದಂತೆ ತನ್ನೆಲ್ಲಾ ಷರತ್ತುಗಳಿಗೆ ಒಪ್ಪಲು ಮತ್ತು ಅದಕ್ಕಾಗಿ ರಾಜತಾಂತ್ರಿಕ ಮಾತುಕತೆ ನಡೆಸಲು ಇರಾನ್ ಗೆ ನೀಡಲಾಗಿರುವ ಗಡುವನ್ನು ಇನ್ನಷ್ಟು ವಿಸ್ತರಿಸಬೇಕು ಹಾಗೂ ಇರಾನ್ ಕೂಡಲೇ ಹೋರ್ಮುಜ್‌ ಅನ್ನು ಹಡಗುಗಳ ಓಡಾಟಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಷರೀಫ್ ಒಂದು ಪೋಸ್ಟ್ ಮಾಡಿದ್ದರು.

ಆದರೆ ಅದರಲ್ಲಿ ‘ಪಾಕ್ ಪ್ರಧಾನಿ ಶೆಹಬಾ ಶೆಹಬಾಜ್ ಷರೀಫ್ ಅವರ ಡ್ರಾಫ್ಟ್’ (ಸಂದೇಶದ ಪ್ರಾಥಮಿಕ ಆವೃತ್ತಿ) ಎಂದು ಬರೆಯಲಾಗಿತ್ತು. ಅಂತಿಮ ಸಂದೇಶ ಆಗಿರಲಿಲ್ಲ. ಬಳಿಕ ಪ್ರಮಾದ ಅರಿತು ಡ್ರಾಫ್ಟ್ ವಿಶ್ವದಲ್ಲಿ ಪಾಕಿಸ್ತಾನಕ್ಕೆ ಇಂದು ಮನ್ನಣೆ ಸಿಕ್ಕಿದೆ. ಪ್ರಧಾನಿ ಷರೀಫ್‌ ಹೆರ್ಷ ಅಮೆರಿಕ-ಇರಾನ್ ತಾತ್ಕಾಲಿಕ ಕದನ ವಿರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ರುವ ಪಾಕಿಸ್ತಾನಕ್ಕೆ ಇಂದು ವಿಶ್ವಮನ್ನಣೆ ಸಿಕ್ಕಿದೆ ಎಂದು ಪ್ರಧಾನಿ ಪ್ರಧಾನಿ ಶಹಬಾಜ್ ಷರೀಫ್ ಹರ್ಷಿಸಿದ್ದಾರೆ. ಕದನ ವಿರಾಮ ಆಗಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ. ಎಂಬುದನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಡ್ರಾಫ್ಟ್ ಪದವು ಹಲವು ಚರ್ಚೆಗೆ ನಾಂದಿ ಹಾಡಿದೆ.

ದೇಶದ ಪ್ರಧಾನಿಯೊಬ್ಬರ ದಿಟ್ಟ ಆಗ್ರಹದ ಸೂಚಕವಾಗಬೇಕಿದ್ದ ಆ ಪೋಸ್ಟ್ ಅವರ ಸ್ವಂತದ್ದಲ್ಲವೇ? ಅದನ್ನು ಬರೆದವರು ಯಾರು? ವಿದೇಶಗಳುತಮಗೆ ಬೇಕಾಗಿದ್ದನ್ನು ಅವರ ಖಾತೆಯ ಮೂಲಕ ಹೇಳುತ್ತಿ ದ್ದಾವೆ ಯೇ? ಎಂಬ ಅನುಮಾನ ಮೂಡಿವೆ. ಈ ಹಿಂದೆ ಪಾಕಿಸ್ತಾನದ ಕೆಲ ಪತ್ರಿಕೆಗಳು ಎಐ ಕೈಲಿ ಬರೆಸಿದ ಸುದ್ದಿಯನ್ನು ಪ್ರಾಮ್ಸ್ (ನಿರ್ದೇಶನ) ಸಮೇತ ಮೇತ ಪ್ರಕಟಿಸಿ ಆಹಾರವಾಗಿದ್ದವು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶ್ರೀ ವಿಶ್ವಕರ್ಮ ಜಕಣಾ ಚಾರ್ಯ ಸಂಸ್ಮರಣಾ ದಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಸನ್ಮಾನ ಕಾರ್ಯಕ್ರಮ:

ಚಾಮನಹಳ್ಳಿಯಲ್ಲಿ ಒಂದು ತಿಂಗಳ ‘ಚರ್ಮವಾದ್ಯ ತರಬೇತಿ’ ಕಾರ್ಯಾಗಾರಕ್ಕೆ ಚಾಲನೆ

ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಭಿತ್ತಿ

Leave a Comment