NEWS

ಕ್ಯಾನ್ಸ‌ರ್ ಆರಂಭದಲ್ಲೇ ಪತ್ತೆಯಾದರೆ ಗುಣಮುಖ

ಪಾಲನೆ ನ್ಯೂಸ್

ಬೆಂಗಳೂರು: ‘ಕ್ಯಾನ್ಸರ್ ಶೀಘ್ರ ಪತ್ತೆ… ರೋಗ ನಾಪತ್ತೆ’ ಎಂಬ ಮಾತಿದೆ. ಅದರಂತೆ ಆರಂಭದಲ್ಲೇ ಕ್ಯಾನ್ಸ‌ರ್ ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಹುದಾಗಿದೆ ಕಾಯಿಲೆ ಸರ್ಜಿಕಲ್ ಎನ್ನುತ್ತಾರೆ ಮಣಿಪಾಲ ಆಸ್ಪತ್ರೆಯ ಅಂಕಾಲಜಿ ಮತ್ತು ರೋಬಾಟಿಕ್ ಸರ್ಜರಿ ವಿಭಾಗದ ಸಲಹೆಗಾರ ಡಾ. ದೇವೇಶ್ ಬಲ್ಲಾಳ್. ಕ್ಯಾನ್ಸರ್ ಕಾಯಿಲೆ ಪತ್ತೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ ನೀಡಿರುವ ಅವರು, ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ.

ಇದರಿಂದ ರೋಗಿಗಳನ್ನು ಸಾವಿನ ದವಡೆಯಿಂದ ತಪ್ಪಿಸಬಹುದಾಗಿದೆ. ಹಾಗೇನಾದರೂ ಕಾಯಿಲೆ ಪತ್ತೆ ಮಾಡುವುದು ವಿಳಂಬವಾದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಹಾಗೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಕ್ಯಾನ್ಸರ್‌ಗೆ ಇರುವ ಹಲವು ಕಾರಣಗಳಲ್ಲಿ ತಂಬಾಕು ಸೇವನೆ ಪ್ರಮುಖವಾಗಿದೆ. ರಾಜ್ಯದಲ್ಲಿ ವರದಿಯಾಗುವ ಒಟ್ಟು ಪ್ರಕರಣಗಳಲ್ಲಿ ಶೇ.25 ತುಂಬಾಕು ಸೇವನೆ ನೇರ ಕಾರಣವಾಗಿದೆ. 2024ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ವಾರ್ಷಿಕ ಅಂದಾಜು 87,855 ಹೊಸ ಕ್ಯಾನ್ಸ‌ರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 26,516 ಮಂದಿ ಸಾವನ್ನಪ್ಪುತ್ತಿದ್ದಾರೆ.

ಧೂಮಪಾನದಂತಹ ದುಶ್ಚಟ, ಆಧುನಿಕ ಜೀವನಶೈಲಿ, ಜಡತ್ವ, ಕಳಪೆ ಆಹಾರ ಸೇವನೆ, ತಪಾಸಣೆ ಸೌಲಭ್ಯವಿದ್ದರೂ ಬಳಕೆ ಮಾಡಿಕೊಳ್ಳದಿರುವುದು, ತಡವಾಗಿ ಕಾಯಿಲೆ ಪತ್ತೆ ಇವುಗಳಿಂದಾಗಿ ಕ್ಯಾನ್ಸರ್ ರೋಗಿಗಳು ಗುಣ ಹೊಂದುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವಿವರಿಸಿದ್ದಾರೆ. ಉತ್ತರ ಕರ್ನಾಟಕದ ತೃತೀಯ ಹಂತದ ಆರೈಕೆ ಕೇಂದ್ರಗಳ ವರದಿಗಳ ಪ್ರಕಾರ, ಕ್ಯಾನ್ಸರ್ ರೋಗಿಗಳಲ್ಲಿ ಶೇ.60 ಮಹಿಳೆಯರಾಗಿದ್ದಾರೆ. ಇವರಲ್ಲಿ 40ರಿಂದ 59 ವರ್ಷ ವಯಸ್ಸಿನ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರೋಗ್ಯದ ಬಗೆಗೆ ನಿರ್ಲಕ್ಷ್ಯ, ವೈದ್ಯರಲ್ಲಿ ತೋರಿಸಲು ಮುಜುಗರದಂತಹ ಕಾರಣಗಳಿಂದಾಗಿ ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ.

ನಗರ ಪ್ರದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಪ್ರಮಾಣ ಶೇ.2.4 ಇದ್ದರೆ, ಗ್ರಾಮೀಣ ಭಾಗಗಳಲ್ಲಿ ಶೇ.1.8 ಇದೆ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆ ವರದಾನವಾಗಿದ್ದು, 2025ರಲ್ಲಿ 40 ಲಕ್ಷಕ್ಕೂ ಅಧಿಕ ಗ್ರಾಮೀಣ ಪ್ರದೇಶದ ನಾಗರಿಕರನ್ನು ಕ್ಯಾನ್ಸ‌ರ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ದೇವೇಶ್ ಬಲ್ಲಾಳ್ ತಿಳಿಸಿದ್ದಾರೆ. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನುರಿತ ವೈದ್ಯರ ತಂಡ ಹೊಂದಿದ್ದು, ಕ್ಯಾನ್ಸರ್‌ಗೆ ಅತ್ಯುತ್ತಮ ಚಿಕಿತ್ಸೆ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಾರತ ಸೆಮಿ ತಲುಪುವುದು ಖಚಿತವಿಲ್ಲ!

ಮಾರ್ಚ್ 11 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ -2026

ಜಪಾನ್‌ನಲ್ಲಿ ಭೂಕಂಪ ಭೀತಿ

Leave a Comment