ಪಾಲನೆ ನ್ಯೂಸ್
ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಏ.7ರಿಂದ 14ರವರೆಗೆ ಹೊನ್ನಾದೇವಮ್ಮ (ಸ್ವರ್ಣಾಂಭ) ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಏ.7ರಂದು ಮಧ್ಯಾಹ್ನ 12 ಗಂಟೆಗೆಹೊನ್ನಾದೇವಮ್ಮ ಅಮ್ಮನವರಿಗೆ ಸರ್ಕಾರ ವತಿಯಿಂದ ಆರತಿ ಪೂಜೆ ನಡೆಯಲಿದೆ. ಏ.9ರಂದು ಮಧ್ಯಾಹ್ನ 1 ಗಂಟೆಗೆ ಹೊನ್ನಾದೇವಮ್ಮನವರ ರಥೋತ್ಸವಕ್ಕೆ ಶಾಸಕ ಎನ್. ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ರಾತ್ರಿ 10 ಗಂಟೆಗೆ ಮುತ್ತಿನಪಲ್ಲಕ್ಕಿ, ತೇಪ್ಪೋತ್ಸವ ನಡೆಯಲಿದೆ.

ಏ.10ರಂದು ರಾತ್ರಿ 10 ಗಂಟೆಗೆ ಮೈಲಾರಯ್ಯನವರ ಕುಟುಂಬಸ್ಥರಿಂದ ರುದ್ರಾಕ್ಷಿ ಮಂಟಪೋತ್ಸವ, ಏ.11ರಂದು ರಾತ್ರಿ 10 ಗಂಟೆಗೆ ಎಡೇಹಳ್ಳಿ ಯಜಮಾನ್ ಗಂಗಣ್ಣ ಕುಟುಂಬಸ್ಥರಿಂದ ಸಿಂಹವಾಹನ, ಕುದುರೆ ಉತ್ಸವ ನಡೆಯಲಿದೆ. ಏ.12ರಂದು ರಾತ್ರಿ 10 ಗಂಟೆಗೆ ಹೊಸಪಾಳ್ಯದ ಬೋರಯ್ಯನವರಕುಟುಂಬಸ್ಥರಿಂದಪೀಠಪ್ರಭಾವಳಿ ಉತ್ಸವ ನಡೆಯಲಿದೆ. ಏ.11ರಂದು ರಾತ್ರಿ 10 ಗಂಟೆಗೆ ಚಿತ್ರ ಮಂಟಪೋತ್ಸವ ಹಾಗೂ ದರ್ಬಾರ್ ಅಲಂಕಾರ್‌ನಡೆಯಲಿದೆ. ಏ.14ರಂದು ರಾತ್ರಿ 10 ಗಂಟೆಗೆ ಶಿವಗಂಗೆ ಗ್ರಾಮಸ್ಥರಿಂದ ಹೂವಿನ ಪಲ್ಲಕ್ಕಿ ಮತ್ತು ದರ್ಬಾರ್‌ಅಲಂಕಾರ ನಡೆಯಲಿದೆ. ಏ.15ರಂದು ಮಧ್ಯಾಹ್ನ 12 ಗಂಟೆಗೆ ಸರ್ಕಾರದ ವತಿಯಿಂದ ಮಹಾಸಂಪ್ರೋಕ್ಷಣೆ ನಡೆಯಲಿದೆ ಎಂದು ಶ್ರೀ ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ದೇವಾಲಯದ ಇಒ ಬೃಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
