NEWS

ಅಪ್ರಾಪ್ತ ವಯಸ್ಸಿನ ಗರ್ಭಿಣಿ ವರದಿ ಕಡ್ಡಾಯ

ಪಾಲನೆ ನ್ಯೂಸ್

ಬೆಂಗಳೂರು: ಯಾವುದೇ ಅಪ್ರಾಪ್ತ ವಯಸ್ಸಿನ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಂಬಂಧಪಟ್ಟ ವೈದ್ಯರು ಪೋಕ್ಸ ಕಾಯ್ದೆಯಡಿ ಕೂಡಲೇ ವಿಶೇಷ ಬಾಲನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ವರದಿ ಮಾಡುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಪ್ರಾಪ್ತ ಗರ್ಭಿಣಿಯರ ಕುರಿತು ವರದಿ ಮಾಡದೆ ಚಿಕಿತ್ಸೆ ನೀಡಿದರೆ ಸಂಬಂಧಪಟ್ಟ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪೋಕೋ ಕಾಯ್ದೆ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಬಾಲಗರ್ಭಿಣಿ ಪ್ರಕರಣಗಳ ವಿವರವನ್ನು ಕಾನೂನುಬದ್ದವಾಗಿ ವರದಿ ಮಾಡಬೇಕು. ಇಂಥ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡಬೇಕು. ಇದರಿಂದ ರಕ್ಷಣಾತ್ಮಕ ಮತ್ತು ಪುನರ್ವಸತಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ಹೇಳಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗಿಲ್ಲಿಗೆ ಸಿಎಂ ಅಭಿನಂದನೆ

17 ವರ್ಷದ ಬಾಲಕಿ ಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

24ಕ್ಕೆ ಮಂಡ್ಯ ನಗರದಲ್ಲಿ ಹಿಂದೂ ಸಮಾಜೋತ್ಸವ

Leave a Comment