NEWS

8 ಕೊಲ್ಲಿ ಬಿಜ್‌ಗೆ ಇರಾನ್‌ ಗುರಿ!

ಪಾಲನೆ ನ್ಯೂಸ್

ಯುಎಇನಲ್ಲಿರುವ 3 ಪ್ರಮುಖ ಸೇತುವೆಗೆ ಳಾದ ಶೇಖ್ ಜಾಯೆದ್, ಅಲ್ ಮಕ್ತಾ ಮತ್ತು ಶೇಖ್ ಖಲೀಫಾ ಹಾಗೂ ಜೋರ್ಡಾನ್‌ನ ಕಿಂಗ್ ಹುಸೇನ್, ಡಾಮಿಯಾ ಮತ್ತು ಅಬ್ರೌನ್ ಸೇತುವೆಗಳು ಇರಾನ್ ಬಿಡುಗಡೆ ಮಾಡಿರುವ ಹಿಟ್ ಲಿಸ್ಟ್‌ನಲ್ಲಿವೆ.

ಇವುಗಳೇ ಗುರಿ ಏಕೆ?: ಈ ಸೇತುವೆಗಳನ್ನು ವರ್ಷಗಟ್ಟಲೆ ಸಮಯ ಮತ್ತು ಶತಕೋಟಿಗ ಳಷ್ಟು ಹಣ ಮೀಸಲಿಟ್ಟು ನಿರ್ಮಿಸಲಾಗಿದೆ. ಇವು ಧ್ವಂಸವಾದರೆ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿಲ್ಲ. ಸರಕು ಪೂರೈಕೆ, ವ್ಯಾಪಾರ ಮತ್ತು ದೈನಂದಿನ ಜನಜೀವನ ಅಸ್ತವ್ಯಸ್ತವಾಗುತ್ತದೆ.

ಟೆಕ್ ಕಂಪನಿ ಗುರಿ: ಬನ್‌ನ ಅಮೆಜಾನ್‌ ನ ಕೌಡ್ ಕಂಪ್ಯೂಟಿಂಗ್ ಕೇಂದ್ರದ ಮೇಲಿನ ದಾಳಿ ಬೆನ್ನಲ್ಲೇ ಇದೀಗ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಮಾಹಿತಿ ಮತ್ತು ಸಂವಹನ ತಂತ್ರ ಜ್ಞಾನ ಕಂಪನಿಗಳು, ವಿದ್ಯುತ್ ಘಟಕಗಳು, ಇಂಧನ ಮೂಲಸೌಲಭ್ಯಗಳು, ಅಮೆರಿಕದ ಷೇರು ಹೊಂದಿರುವ ಕಂಪನಿಗಳನ್ನು ಗುರಿಯಾ ಗಿರಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದೆ. ಗೂಗಲ್‌ನಲ್ಲಿ ಮರೆಮಾಚಲಾಗಿದ್ದರೂ ನಮ್ಮ ಕಣ್ಣಿಗೆ ಯಾವುದನ್ನೂ ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಲಾಗಿರುವ ಈ ಸಂದೇಶದಲ್ಲಿ, ಯುಎಇಯ ಸ್ಟಾರ್‌ಗೇಟ್‌ ಎಐ ಕಂಪ್ಯೂಟಿಂಗ್ ಕ್ಲಸ್ಟ‌ರ್ ಮತ್ತು ಎನ್‌ವಿಡಿಯಾ, ಓಪನ್ ಎಐ, ಮೈಕ್ರೋಸಾಫ್ಟ್, ಗೋಲ್ಡ್‌ಮನ್‌ ಸ್ಯಾಕ್ಸ್‌ ಮತ್ತಿ ತರ ಕಂಪನಿಗಳ ವಿವರವನ್ನೂ ನೀಡಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶ್ರೀ ಭೂಮಿ ಸಿದ್ದೇಶ್ವರ ದೇಗುಲ ನೂತನ ನಿರ್ದೇಶಕ ಜಗದೀಶ್ ಗೆ ಶಾಸಕರ ಅಭಿನಂದನೆ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಗೀತೆಗೆ ವಿರೋಧ

Leave a Comment