ಪಾಲನೆ ನ್ಯೂಸ್
ಶ್ರೀವಿಜಯಪುರಂ: ಅಂಡಮಾನ್ ಮತ್ತು ನಿಕೋಬಾರ್‌ನ ಸ್ವರಾಜ್ ದ್ವೀಪದ (ಹೆವಲಾಕ್ ದ್ವೀಪ) ಬಳಿ ಸಮುದ್ರದಲ್ಲಿ ಜಗತ್ತಿನ ಅತಿ ಎತ್ತರದ ಅಂತರ್ಜಲಮಾನವಗೋಪುರವನ್ನು ರಚಿಸುವ ಮೂಲಕ ಭಾನುವಾರ ಮತ್ತೊಂದು ಗಿನ್ನೆಸ್ ದಾಖಲೆ ಬರೆಯಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಸೇರಿದಂತೆ 14 ಮಂದಿ ಈ ಸಾಧನೆಯಲ್ಲಿ ಭಾಗವಹಿಸಿದ್ದು, 22.3 ಮೀ. ಉದ್ದದ ಮಾನವ ಗೋಪುರವನ್ನು ನಿರ್ಮಿಸಿ 3 ನಿಮಿಷಗಳ ಕಾಲ ನೀರಿನಡಿಯಲ್ಲೇ ಉಳಿದು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇವಲ ಎರಡು ದಿನಗಳಲ್ಲಿ 2 ಗಿನ್ನೆಸ್ ದಾಖಲೆ ನಿರ್ಮಿಸಿದಂತಾಗಿದೆ.

ಇದಕ್ಕೂ ಮುನ್ನ ಶನಿವಾರದಂದು ಅದೇ ದ್ವೀಪದ ಸಮುದ್ರದ ನೀರಿನಲ್ಲಿ 60×40 ಮೀ. ಅಳತೆಯ ತ್ರಿವರ್ಣ ಧ್ವಜವನ್ನು ಅನಾವರಣ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಲಾಗಿತ್ತು. ಲೆ. ಗ. ಡಿ.ಕೆ. ಜೋಶಿ ಅವರು ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಈ ಸಾಧನೆಗಳು ಅಂಡಮಾನ್ ಅನ್ನು ವಿಶ್ವ ಮಟ್ಟದ ಸ್ಕೂಬಾ ಡೈವಿಂಗ್ ಮತ್ತು ಪರಿಸರ ಪ್ರವಾಸೋದ್ಯಮದ ಕೇಂದ್ರವಾಗಿ ಪರಿಚಯಿಸುವ ದೊಡ್ಡ ಯೋಜನೆಯ ಭಾಗವಾಗಿವೆ. ಇದಕ್ಕಾಗಿ ಹಲವು ಇಲಾಖೆಗಳು, ತರಬೇತಿ ಪಡೆದ ಡೈವರ್‌ಗಳು ಮತ್ತು ತಾಂತ್ರಿಕ ತಂಡಗಳು ಒಟ್ಟಾಗಿ ಕೆಲಸ ಮಾಡಿದ್ದವು.
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
