NEWS

ಇಂದಿನಿಂದ ಆರ್‌ಟಿಇ ಅರ್ಜಿ ಸಲ್ಲಿಕೆ ಟ್ರಯಲ್

ಪಾಲನೆ ನ್ಯೂಸ್
ಮಂಡ್ಯ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27ನೇ ಸಾಲಿನ ಖಾಸಗಿ ಶಾಲೆಗಳ ಉಚಿತ ಸೀಟು ಹಂಚಿಕೆಗಾಗಿ ಪರೀಕ್ಷಾರ್ಥವಾಗಿ ಶನಿವಾರದಿಂದ (ಏ.18) ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಏ.21ರಿಂದ ನೈಜ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.

ಎಲ್‌ಕೆಜಿ ಹಾಗೂ 1ನೇ ತರಗತಿ ಪ್ರವೇಶಕ್ಕೆ ಖಾಸಗಿ ಶಾಲೆಗಳಲ್ಲಿ ಶೇ.25ರಂತೆ ಹಾಗೂ ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಕನಿಷ್ಠ ಸೀಟುಗಳ ವಿವರಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಏ.18, 19ರಂದು ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಯೋಗಾರ್ಥ ಅವಧಿ ಎಂದು ನಿಗದಿ ಮಾಡಲಾಗಿದೆ. ಬಳಿಕ ಏ.21ರಿಂದ ಮೇ 17ರವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇರಲಿದೆ ಎಂದು ಪರಿಷ್ಕೃತ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಮೇ 22ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಿದೆ. ಮೇ 25ರಂದು ಆನ್‌ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯಾಗಲಿದೆ.

ಏಕಲವ್ಯ ವಸತಿ ಶಾಲೆ ಆಯ್ಕೆಪಟ್ಟಿ: ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (ಇಎಂಆರ್‌ಎಸ್) ಆರನೇ ತರಗತಿ ಪ್ರವೇಶಕ್ಕೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

ಆಯಾ ಜಿಲ್ಲೆಗಳಲ್ಲಿರುವ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ನೀಡಲಾಗಿದೆ. ಪ್ರತಿ ವಸತಿ ಶಾಲೆಗೆ 45-55ರವರೆಗೆ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗಿದೆ. ಆಯ್ಕೆ ಪಟ್ಟಿ ಲಿಂಕ್: https://bit.ly/48FaDBr.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ದಿಲ್ಲಿಗೆ ನಾನು ಗಾಳಿ ಕುಡಿಯಲು ಬಂದಿಲ್ಲ: ಉಪಮುಖ್ಯಮಂತ್ರಿ

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

ಹೆಚ್ಚಿನ ಸುಂಕ ಹಾಕಿರುವುದರಿಂದ ಪ್ರಧಾನಿ ಮೋದಿಗೆ ನನ್ನ ಮೇಲೆ ಅತೃಪ್ತಿಯಿದೆ: ಡೊನಾಲ್ಡ್‌ ಟ್ರಂಪ್‌

Leave a Comment