ಪಾಲನೆ ನ್ಯೂಸ್
ಟೆಹ್ರಾನ್: ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ ಅಂದಿನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಬಳಿಕ ಸರ್ವೋಚ್ಚ ನಾಯಕ ಪಟ್ಟಕ್ಕೇರಿದ್ದ ಮೊಜಬಾ ಖಮೇನಿ ಕೂಡ ಇದೀಗ ಜೀವಂತ ಶವವಾಗಿದ್ದು, ‘ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮೊಜ್ಜಾಬಾಗೆ ಯುದ್ಧವೂ ಗೊತ್ತಿಲ್ಲ. ಕದನ ವಿರಾಮದ ಅರಿವೂ ಇಲ್ಲ ಎಂದು ಹೇಳಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜಬಾ ಖಮೇನಿ ಆರೋಗ್ಯದ ಮಾಹಿತಿ ಲಭ್ಯವಾಗಿದ್ದು, ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್‌ನ ವರದಿಯ ಪ್ರಕಾರ, ಮೊಜ್ಜಬಾ ಖಮೇನಿ ಬದುಕುಳಿದಿದ್ದಾರೆ.
ಆದರೆ ಅವರ ಸ್ಥಿತಿ ದೇಶವನ್ನು ನಡೆಸಲು ಅಸಮರ್ಥವಾಗಿದೆ. ಮೊಜ್ರಾಬಾ ಖಮೇನಿ ಪ್ರಸ್ತುತ ಪ್ರಜ್ಞಾಹೀನರಾಗಿದ್ದು, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಜಬಾ ಖಮೇನಿ ಸದ್ಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲ. ಅವರಿಗೆ ಯುದ್ಧದ ಇರಾನ್‌ನ ಸರ್ವೋಚ್ಚ ನಾಯಕನ ಸ್ಥಳ ಬಹಿರಂಗಗೊಳ್ಳುತ್ತಿರುವುದು ಇದೇ ಮೊದಲು. ಕೋಮ್ ಕೇಂದ್ರ ನಗರವು ಟೆಹ್ರಾನ್ನ ದಕ್ಷಿಣಕ್ಕೆ 87 ಮೈಲಿಗಳು (ಸುಮಾರು 140 ಕಿಲೋಮೀಟರ್) ದೂರದಲ್ಲಿದೆ.
ಈ ನಗರವನ್ನು ಶಿಯಾ ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಸ್ಲಾಮಿಕ್ ಗಣರಾಜ್ಯದ ಧಾರ್ಮಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಸುದ್ದಿಯಿಲ್ಲ, ಕದನ ವಿರಾಮದ ಅರಿವಿಲ್ಲ ಎಂದು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಮಾಹಿತಿ ಒಂದು ರಾಜತಾಂತ್ರಿಕ ಜ್ಞಾಪಕ ಪತ್ರದಲ್ಲಿ (ಡಿಪ್ಲೋಮ್ಯಾಟಿಕ್ ಮೆಮೊ) ಇದೆ. ಈ ಜ್ಞಾಪಕ ಪತ್ರ ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಸಂಸ್ಥೆಗಳ ಮಾಹಿತಿಯನ್ನು ಆಧರಿಸಿದೆ. ಇದನ್ನು ಗಲ್ಫ್ ರಾಷ್ಟ್ರಗಳಲ್ಲಿನ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪತ್ರಿಕೆಯ ಪ್ರಕಾರ, ಮೊಜಬಾ ಖಮೇನಿಗೆ ಟೆಹ್ರಾನ್ ನಿಂದ ಸುಮಾರು 140 ಕಿಲೋಮೀಟರ್ ದಕ್ಷಿಣಕ್ಕಿರುವ ಪವಿತ್ರ ನಗರ ಕೋಮ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ವರದಿಗಳಲ್ಲಿ ಮೊಜಬಾ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಷ್ಯಾದ ರಾಯಭಾರಿ, ಅವರು ಇರಾನ್‌ನಲ್ಲೇ ಉಳಿದಿದ್ದಾರೆ ಎಂದು ತಿಳಿಸಿದ್ದರು. ಈಗ ದಿ ಟೈಮ್ಸ್ ಈ ಮಾಹಿತಿಯನ್ನು ದೃಢಪಡಿಸಿದೆ ಎನ್ನಲಾಗಿದೆ. ಫೆಬ್ರವರಿ 28 ರಂದು ಆಗಿದ್ದೇನು? ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೊಜಬಾ ಖಮೇನಿ ಅವರ ತಂದೆ, ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಲ ಖಮೇನಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ಸಾವಿಗೀಡಾಗಿದ್ದರು. ಅದೇ ದಾಳಿಯಲ್ಲಿ ಮೊಜಬಾ ಕೂಡ ಗಾಯಗೊಂಡಿದ್ದರು. ಆದರೆ ಅವರು ಅದೃಷ್ಟವಶಾತ್ ಬದುಕುಳಿದಿದ್ದು, ದಾಳಿ ನಡೆಯುವ ಕೆಲವೇ ನಿಮಿಷಗಳ ಮುಂಚೆ ಅವರು ತಮ್ಮ ಮನೆಯ ತೋಟಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು ಇಸ್ರೇಲ್‌ನ ‘ಬ್ಲೂ ಸ್ವಾರೋ’ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮನೆಯನ್ನು ಹೊಡೆಯುವ ಕೆಲವೇ ಕ್ಷಣಗಳ ಮುಂಚೆ ಅವರು ಕೆಲ ಕೆಲಸಗಳಿಂದ ಹೊರಗೆ ಹೊರಟಿದ್ದರು ಎಂದು ಸೋರಿಕೆಯಾದ ಆಡಿಯೋ ತಿಳಿಸುತ್ತದೆ. ಹೀಗಾಗಿ ಅವರು ಕೆಲವೇ ಸೆಕೆಂಡುಗಳ ಅಂತರದಲ್ಲಿ ಪಾರಾಗಿದ್ದರು. ಆದರೆ ದಾಳಿಯಲ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
