NEWS

ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಅಕ್ರಮವಾಗಿ ದಾಸ್ತಾನು ಮಾಡುವುದು ಕಾನೂನುಬಾಹಿರ

ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ; ಸಾಕಷ್ಟು ದಾಸ್ತಾನು ಲಭ್ಯವಿದೆ : ಡಾ ಕುಮಾರ

ಪಾಲನೆ ನ್ಯೂಸ್

    ಮಂಡ್ಯ: ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾಕಷ್ಟು ದಾಸ್ತಾನು ಲಭ್ಯವಿದ್ದು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

    ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ HPC , BPC ಮತ್ತು IOC, ಇಂಧನ ವಿತರಕ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದರು.

    ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು (ಹೋಗ್ಗಿಂಗ್) ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಸುರಕ್ಷಿತ ಸಂಗ್ರಹವು ಭೀಕರ ಅಗ್ನಿ ಅವಘಡಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದರು.

    ಜಿಲ್ಲೆಯಲ್ಲಿ 182 ಪೆಟ್ರೋಲ್ ಬಂಕ್ ಗಳಿದ್ದು ಜಿಲ್ಲೆಯಲ್ಲಿ ಪ್ರತಿ ನಿತ್ಯ 2.31 (ಲಕ್ಷ) ಲೀಟರ್ ಇಂಧನ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ 11.81 (ಲಕ್ಷ ) ಲೀಟರ್ ಪೆಟ್ರೋಲ್ ಸಂಗ್ರಹಣೆ ಇದೆ ಹಾಗೂ 18 (ಲಕ್ಷ ) ಲೀಟರ್ ಡೀಸೆಲ್ ಸಂಗ್ರಹಣೆ ಇದೆ ಸಾರ್ವಜನಿಕರು ಆತಂಕ ಪಟ್ಟು ಅನಗತ್ಯವಾಗಿ ಕ್ಯಾನ್, ಬಾಟೆಲ್ ನಲ್ಲಿ ತುಂಬಿಸಿ ಶೇಕರಣಾ ವನ್ನು ಮಾಡಬೇಡಿ ಎಂದು ತಿಳಿಸಿದರು.

    ಸಾರ್ವಜನಿಕರು ಪೆಟ್ರೋಲಿಯಂ ಉತ್ಪನ್ನಗಳನ್ನು ಅನಾವಶ್ಯಕವಾಗಿ ಸಂಗ್ರಹಿಸಿಡುವುದು ಕಾನೂನು ಬಾಹಿರವಾಗಿದ್ದು ಇದು ಅಸುರಕ್ಷಿತವಾಗಿದ್ದು, ಅಗ್ನಿ ಅವಘಡಗಳು ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಮತ್ತು ಅನಗತ್ಯವಾಗಿ ಕ್ಯಾನ್ ಮತ್ತು ಬಾಟಲ್ ಗಳಲ್ಲಿ ತುಂಬಿಸುವವರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಸೂಚಿಸಿದರು.

    ಮಂಡ್ಯ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ವದಂತಿಗಳಿಂದಾಗಿ ಮಂಡ್ಯದ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರು ದೀರ್ಘ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಅನಗತ್ಯವಾಗಿ ಇಂಧನವನ್ನು ಸಂಗ್ರಹಣೆ ಮಾಡದಂತೆ ಕ್ಯಾನ್ ಗಳಿಗೆ ಇಂಧನವನ್ನು ತುಂಬಿಸದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

    ಪೆಟ್ರೋಲ್ ಬಂಕ್ ಮಾಲೀಕರು ಕಾನೂನು ನಿಯಮ ಹಾಗೂ ಸುತ್ತೋಲೆಗಳನ್ನು ಅನುಸರಿಸಬೇಕು ಹಾಗೂ ಇಂಧನವನ್ನು ಕ್ಯಾನ್ ಅಥವಾ ಬಾಟಲ್ ಗಳಲ್ಲಿ ತುಂಬಿಸುವ ಪ್ರಕ್ರಿಯೆಯನ್ನು ನಿರ್ಬಂಧಿಸಬೇಕು ಎಂದು ಎಂದು ಸೂಚಿಸಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ ಶೋಭಾರಾಣಿ, ಆಹಾರ ಇಲಾಖೆ ಉಪ ನಿರ್ದೇಶಕರು ಪ್ರತಿಕ್ ಹೆಗ್ಡೆ, ಪೆಟ್ರೋಲಿಯಂ ಉತ್ಪನ್ನಗಳ ಮಾಲೀಕರು ಭಾಗವಹಿಸಿದ್ದರು.

    ✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಆಧಾ‌ರ್ ಬದಲು ಸ್ಮಾರ್ಟ್‌ ಕಾರ್ಡ್

    ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ವೇಗ: ಸಿಎಂ ಸಿದ್ದರಾಮಯ್ಯ ಹೇಳಿಕೆ-Guarantee schemes

    ಮಾರ್ಚ್ 25 ರಂದು 2025 -26ನೇ ಸಾಲಿನ ರಾಜ್ಯಮಟ್ಟದ ಅಂತರ್ ವಿದ್ಯುತ್ ಕಂಪನಿಗಳ ಕ್ರೀಡಾಕೂಟ ಕಾರ್ಯಕ್ರಮ

    Leave a Comment