NEWS

ದ್ರಾವಿಡ್, ಲಕ್ಷ್ಮಣ್‌ಗೆ ಟ್ರೋಫಿ ಅರ್ಪಣೆ ಮಾಡಿದ ಗೌತಮ್ ಗಂಭೀರ್

ಪಾಲನೆ ನ್ಯೂಸ್

ಮುಂಬೈ: ಟಿ20 ವಿಶ್ವಕಪ್ ಗೆಲುವನ್ನು ಹಿರಿಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಅವರಿಗೆ ಅರ್ಪಿಸಿರುವುದಾಗಿ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತು ದಾರ ಗೌತಮ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಜನರಿಗೆ ನಾನು ಜವಾಬ್ದಾರ ನಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಆ 30 ಜನರಿಗೆ ಮಾತ್ರ ನಾನು ಜವಾಬ್ದಾರ. ಒಬ್ಬ ತರಬೇತುದಾರ ತನ್ನ ತಂಡದಷ್ಟೇ ಒಳ್ಳೆಯವನು. ಆಟಗಾರರು ನನ್ನನ್ನು ತರಬೇತುದಾರರನ್ನಾಗಿ ಮಾಡಿದ್ದಾರೆಂದು ಟೀಕಾಕಾರರಿಗೆ ಗಂಭೀ‌ರ್ ತಿರುಗೇಟು ಕೊಟ್ಟಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಪ್ರಸ್ತುತ ಮುಖ್ಯಸ್ಥ ಲಕ್ಷ್ಮಣ್ ಅವರನ್ನು ಗಂಭೀರ್ ನೆನಪಿಸಿಕೊಂಡಿದ್ದಾರೆ. ನಾನು ಈ ಟ್ರೋಫಿಯನ್ನು ಅವರಿಗೆ ಅರ್ಪಿಸುತ್ತೇನೆ. ಭಾರತೀಯ ತಂಡವನ್ನು ಒಂದು ಸ್ಥಾನದಲ್ಲಿ ಇರಿಸಿ ದ್ದಕ್ಕಾಗಿ ರಾಹುಲ್ ಭಾಯ್ ಮತ್ತು ಸಿಒಇಯಲ್ಲಿ Champions 2026 ಪೈಪ್‌ಲೈನ್ ರಚಿಸಿದ ಲಕ್ಷ್ಮಣ್ ಅವರಿಗೆ ಕೃತಜ್ಞತೆ ಗಳು. ಇವರಿಬ್ಬರೂ ನನ್ನ ಕಷ್ಟದ ಜೊತೆಗೆ ನಿಂತರು ಎಂದು ತಿಳಿಸಿದ್ದಾರೆ. ಸತತವಾಗಿ 2 ಬಾರಿ ವಿಶ್ವಕಪ್ ಗೆದ್ದ ಭಾರತಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಐಟಿಐ, ಡಿಪ್ಲೊಮಾ ಎಲ್‌ಎಲ್‌ಬಿಗೆ ಅರ್ಹ

ಮಂಡ್ಯ- ಜನಗಣತಿ ಕಾರ್ಯವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ವಿಶ್ವಮಾನವ ದಿನಾಚರಣೆ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ:ಬಿ.ಸಿ ಶಿವಾನಂದ ಮೂರ್ತಿ

Leave a Comment