NEWS

ಗುಂಡ್ಲುಪೇಟೆ, ಮೈಸೂರಿನಲ್ಲಿ ನಾಗರಹೊಳೆ, ಬಂಡಿಪುರ ಸಫಾರಿ ಪುನಾರಂಭಕ್ಕೆ ರೈತರಿಂದ ವಿರೋಧ

ಪಾಲನೆ ನ್ಯೂಸ್

ಗುಂಡ್ಲುಪೇಟೆ : ಮೈಸೂರು ನಾಗರಹೊಳೆ, ಬಂಡಿಪುರದಲ್ಲಿ ಪುನಃ ಸಫಾರಿ ಆರಂಭಿಸಿದನ್ನು ವಿರೋಧಿಸಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹಾಗೂ ಮೈಸೂರಲ್ಲಿ ರೈತರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು.

ಗುಂಡ್ಲುಪೇಟೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮೈಸೂರು-ಊಟಿ ಹೆದ್ದಾರಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹೋರಾಟದಿಂದಸ್ಥಗಿತಗೊಳಿಸಲಾಗಿದ್ದಸಫಾರಿಯನ್ನು ರಾಜ್ಯ ಸರ್ಕಾರಮತ್ತೆ ಆರಂಭಿಸಲು ಮುಂದಾಗಿದ್ದು, ಇದರಿಂದ ವನ್ಯಜೀವಿಗಳ ಏಕಾಂತಕ್ಕೆ ಧಕ್ಕೆಯಾಗಿ ಕಾಡು ಪ್ರಾಣಿಗಳು ಪಕ್ಕದ ಹಳ್ಳಿಗಳಿಗೆ ಬರುತ್ತವೆ. ಅಲ್ಲದೇ ರೈತನ ಬೆಳೆ ನಾಶ ಮಾಡುತ್ತವೆ. ಹಾಗಾಗಿ ಸಫಾರಿ ಆರಂಭಿಸುವುದು ಬೇಡ ಎಂದು ಆಗ್ರಹಿಸಿದರು.

ಆ ಬಳಿಕ ತಾಲೂಕು ಕಚೇರಿಗೆ ತೆರಳಿ ಸಫಾರಿ ಆರಂಭಿಸದಂತೆ ತಹಸೀಲ್ದಾರ್ ಎಂ.ಎಸ್.ತನ್ಮಯ್‌ಗೆ ಮನವಿ ಸಲ್ಲಿಸಿದರು. ಇನ್ನು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಗೇಟ್ ಬಂದ್ ಮಾಡಿದ್ದರಿಂದ ಗೇಟ್ ಮುಂಭಾಗದಲ್ಲೇ ಪ್ರತಿಭಟಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಬಂಡಿಪುರ ಉಳಿಸಿ, ನಾಗರಹೊಳೆ ಉಳಿಸಿ, ಅರಣ್ಯ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗುತ್ತಾ ಸಫಾರಿ ಬಂದ್‌ ಮಾಡುವಂತೆ ಒತ್ತಾಯಿಸಿದರು. ಸರ್ಕಾರದ ನಿರ್ಧಾರ ರೈತರು, ಪ್ರಾಣಿಗಳು ಹಾಗೂ ಪರಿಸರ ವಿರೋಧಿಯಾಗಿದೆ. ಕೇವಲ ಬಂಡವಾಳಶಾಹಿಗಳು, ಶ್ರೀಮಂತರ ಮೋಜು ಮಸ್ತಿಗಾಗಿ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡಲು ಮುಂದಾಗಿರುವುದು ಸರಿಯಲ್ಲ. ಸಫಾರಿ ಹಣದಿಂದ ಸರ್ಕಾರ ನಡೆಸುವ ದರಿದ್ರ ರಾಜ್ಯ ಸರ್ಕಾರಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತರು ವಾಗ್ದಾಳಿ ನಡೆಸಿದರು

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಾಳೆಯಿಂದ ಪಟ್ಟಲದಮ್ಮ ಸಿಡಿಹಬ್ಬ

ಕೆಆರ್ ಎಸ್  ಹಿನ್ನೀರು ಪ್ರದೇಶದಲ್ಲಿ  ಒತ್ತುವರಿ ತೆರವುಗೊಳಿಸಲು ಸರ್ವೆ ಸೂಚನೆ

ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯವಾಗಿದೆ: ಪ್ರೊ.ಕೆ.ಶಿವಚಿತ್ತಪ್ಪ‌

Leave a Comment